ತೆಲಂಗಾಣದ ಆರು ಪ್ರಮುಖ ಮೆಡಿಕಲ್ ಗ್ರೂಪ್, ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಮೇಲೆ ಜಾರಿ ನಿರ್ದೇಶನಾಲಯ ಬುಧವಾರ ದಾಳಿ ನಡೆಸಿದೆ. ಶಶಿಧರ್ ಕಾಮಿನೇನಿ, ವಸುಂಧರಾ ಕಾಮಿನೇನಿ, ಸೂರ್ಯನಾರಾಯಣ ಕಾಮಿನೇನಿ ಮತ್ತು ಗಾಯತ್ರಿ ಕಾಮಿನೇನಿ ಸೇರಿದಂತೆ ಕಾಮಿನೇನಿ ಸಮೂಹದ ಎಂಡಿ ಮತ್ತು ಅಧ್ಯಕ್ಷರ ನಿವಾಸಗಳನ್ನು ಶೋಧಿಸಲಾಗುತ್ತಿದೆ ಎಂದು ಟಿವಿ9 ತೆಲುಗು ವರದಿ ಮಾಡಿದೆ. ಮಹಬೂಬ್‌ನಗರ ಮತ್ತು ರಂಗಾರೆಡ್ಡಿ ಜಿಲ್ಲೆಗಳ ಎಸ್‌ವಿಎಸ್ ವೈದ್ಯಕೀಯ ಕಾಲೇಜಿನಲ್ಲಿಯೂ ಶೋಧ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ರಾಜ್ಯಾದ್ಯಂತ ಒಟ್ಟು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಶಮೀರ್‌ಪೇಟೆಯ ಮೆಡಿಸಿಟಿ ಇನ್‌ಸ್ಟಿಟ್ಯೂಟ್‌ನಲ್ಲೂ ಇಡಿ ದಾಳಿ ನಡೆಯುತ್ತಿದೆ. ಇದಲ್ಲದೆ, ಫಿಲಂ ನಗರದಲ್ಲಿರುವ ಪ್ರತಿಮಾ ಕಾರ್ಪೊರೇಟ್ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ. ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಲು ಎರಡು ತಂಡಗಳಾಗಿ ಬಂದಿದ್ದು, ಪ್ರತಿಮಾ ಗ್ರೂಪ್‌ಗೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳನ್ನು ಅವರು ಪ್ರಶ್ನಿಸುತ್ತಿದ್ದಾರೆ.
ಇತ್ತೀಚೆಗೆ ಜಾರಿ ನಿರ್ದೇಶನಾಲಯ ಹಲವು ಬಿಆರ್‌ಎಸ್ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಅವರನ್ನು ವಿಚಾರಣೆಗೊಳಪಡಿಸಲು ಇಡಿ ನೋಟಿಸ್ ಜಾರಿ ಮಾಡಿದೆ. ಬುಧವಾರ ಬಶೀರ್ ಬಾಗ್‌ನಲ್ಲಿರುವ ಇಡಿ ಕಚೇರಿಯಿಂದ ಇಡಿ ಅಧಿಕಾರಿಗಳು 11 ತಂಡಗಳಲ್ಲಿ ಹೊರಟಿದ್ದಾರೆ.