ಶ್ರೀರಾಮ ಮಂದಿರಕ್ಕೆ ಮೃತ್ತಿಕೆಗಳ ಸಂಗ್ರಹ : ಗ್ರಾಮಗಳಲ್ಲಿರುವ ಹನುಮ ಮಂದಿರದ ಸ್ವಚ್ಛತಾ ಕಾರ್ಯ

ಕುಮಟಾ : ತಾಲೂಕಿನ ಯುವಾ ಬಿಗ್ರೇಡ್ ತಂಡದ ಸದಸ್ಯರು ರವಿವಾರ ಇಲ್ಲಿನ ಚಂದಾವರ ಸೀಮೆಯ ಪ್ರಸಿದ್ಧ ಶ್ರೀ ಹನುಮಂತ ದೇವಾಲಯಕ್ಕೆ ತೆರಳಿ, ದೇವಾಲಯದ ಆವಾರವನ್ನು ಸ್ವಚ್ಛಗೊಳಿಸಿ ಅಲ್ಲಿಯ ಮಣ್ಣನ್ನು ಸಂಗ್ರಹಿಸಿದರು.
ರಾಜ್ಯ ವ್ಯಾಪಿ ನಡೆಯುತ್ತಿರುವ “ಶ್ರೀರಾಮ ಮಂದಿರಕ್ಕೆ ಹನುಮ‌ನ ನಾಡಿನ ಮೃತ್ತಿಕೆ” ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಯುವಾ ಬ್ರಿಗೇಡ್ ತಂಡದ ಸದಸ್ಯರು ಈ ಕಾರ್ಯ ಕೈಗೊಂಡರು. ದೇವಾಲಯದ ಒಳ ಹಾಗೂ ಹೊರ ಆವರಣದಲ್ಲಿನ ಕಸ, ಕಡ್ಡಿಗಳನ್ನು, ಪ್ಲಾಸ್ಟಿಕ್ ಗಳನ್ನು ತೆಗೆದು, ಸ್ವಚ್ಛಗೊಳಿಸುವುದರ ಜೊತೆಗೆ, ಕಟ್ಟಡವನ್ನು ತೊಳೆದು ಸ್ವಚ್ಛಗೊಳಿಸಿದರು. ಗ್ರಾಮ, ಗ್ರಾಮಗಳಲ್ಲಿರುವ ಹನುಮ ದೇವಾಲಯಕ್ಕೆ ತೆರಳಿ, ಅಲ್ಲಿಯ ಪರಿಸರ ಸ್ವಚ್ಛ ಮಾಡುವ ಹಾಗೂ ಅಲ್ಲಿಯ ಮಣ್ಣನ್ನು ಸಂಗ್ರಹಿಸಿ ರಾಮ ಮಂದಿರಕ್ಕೆ ಕಳಿಸಿಕೊಡುವ ಯೋಜನೆ ಯುವಾ ಬ್ರಿಗೇಡ್ ತಂಡದ್ದಾಗಿದೆ. ಇವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ…