ದಾಂಡೇಲಿಯಲ್ಲಿ ಧರೆಗುರುಳಿದ ಬೃಹತ್ ಮರ -‌ ವಿದ್ಯುತ್ ಕಂಬಗಳಿಗೆ ಹಾನಿ – ಸಂಚಾರ ಅಸ್ತವ್ಯಸ್ತ

ದಾಂಡೇಲಿ : ತಾಲ್ಲೂಕಿನ ಅಂಬೇವಾಡಿ – ಗಾವಟಾನ ರಸ್ತೆಯಲ್ಲಿ ಮರವೊಂದು ಧರೆಗುರುಳಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.

ದಾಂಡೇಲಿ ತಾಲ್ಲೂಕಿನ ಅಂಬೇವಾಡಿಯಿಂದ‌ ಮೌಳಂಗಿಗೆ ಹೋಗುವ ರಸ್ತೆಯ ಆರಂಭದಲ್ಲೆ ಬೃಹತ್‌ ಮರವೊಂದು ಧರೆಗುರುಳಿತ್ತು. ಮರ ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದ್ದರಿಂದ, ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಹೊತ್ತು ವಿದ್ಯುತ್ ಸಂಪರ್ಕವು ಸ್ಥಗಿತಗೊಂಡಿತ್ತು. ತಕ್ಷಣವೆ ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಲ್ಲಿ ರಸ್ತೆಗುರುಳಿದ್ದ ಮರವನ್ನು ತೆರವುಗೊಳಿಸಿದ್ದಾರೆ…

ಸಂದೇಶ್‌ ಜೈನ್‌, ನುಡಿ ಸಿರಿ ನ್ಯೂಸ್‌, ದಾಂಡೇಲಿ