ಗುವಾಹಟಿ: ಮಣಿಪುರಲ್ಲಿ ಮತ್ತೆ ಹಿಂಸಾಚಾರ ಉಂಟಾಗಿದ್ದು, ಪ್ರತಿಭಟನಕಾರರು ಮತ್ತು ಸೇನೆ ನಡೆವೆ ಸಂಘರ್ಷ ನಡೆದಿದೆ. ನೆನ್ನೆ ರಾತ್ರಿಯಿಂದ ಸೇನೆ ಮತ್ತು ಪೊಲೀಸರ ಮೇಲೆ ಪ್ರತಿಭಟನಾಕರರು ಗುಂಡಿನ ದಾಳಿ ನಡೆಸಿದ್ದಾರೆ. ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ ಜಿಲ್ಲೆಯ ಕಾಂಗ್‌ವಾಯ್‌ನಿಂದ ನಿನ್ನೆ ರಾತ್ರಿಯಿಂದ ಇಂದು ಬೆಳಗಿನ ಜಾವದವರೆಗೂ ಮಧ್ಯಂತರ ಗುಂಡಿನ ದಾಳಿಗಳು ವರದಿಯಾಗುತ್ತಿವೆ ಎಂದು ಪೊಲೀಸ್ ಮತ್ತು ಸೇನಾ ಮೂಲಗಳು ತಿಳಿಸಿವೆ. ಪ್ರತಿಭಟನಾಕರರು ಅನೇಕ ಕಡೆ ಗುಂಡಿನ ದಾಳಿ ಮತ್ತು ಮನೆಗಳ ಮೇಲೆ ಬೆಂಕಿ ಹಚ್ಚುವ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ವರದಿಯಾಗಿವೆ. ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ರಾಪಿಡ್ ಆಕ್ಷನ್ ಫೋರ್ಸ್ ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆಯನ್ನು ಮಾಡಿದೆ.
ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್ ನಲ್ಲಿ ಬೆಂಕಿ ಹಚ್ಚುವ ಯತ್ನ ನಡೆದಿದೆ. ಸುಮಾರು 1,000 ಜನರ ಗುಂಪು ನಿನ್ನೆ ಸಂಜೆ ಕಲೆವೊಂದು ಮನೆಗಳಿಗೆ ಬೆಂಕಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಗುಂಪನ್ನು ಚದುರಿಸಲು ಆರ್‌ಎಎಫ್ ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿತು, ಇದರಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪೊಂದು ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ರಾತ್ರಿ 10.40ಕ್ಕೆ ತೊಂಗ್ಜು ಬಳಿ ಜಮಾಯಿಸಿದ 200ರಿಂದ 300 ಮಂದಿ, ಸ್ಥಳೀಯ ಶಾಸಕರ ನಿವಾಸವನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ. RAF ನ ಒಂದು ಗುಂಪನ್ನು ಅಲ್ಲಿಮದ ಚದುರಿಸಿದೆ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿ ಮತ್ತೊಂದು ಗುಂಪು ಇಂಫಾಲ್ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ ಪೊಲೀಸ್ ಠಾಣೆಯ ಶಸ್ತ್ರಾಗಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ರಾತ್ರಿ 11.40ರ ವೇಳೆಗೆ 300ರಿಂದ 400 ಮಂದಿ ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದೆ. ಸೇನಾ ಮೂಲಗಳ ಪ್ರಕಾರ, 200 ರಿಂದ 300 ಜನರ ಗುಂಪೊಂದು ಮಧ್ಯರಾತ್ರಿಯ ನಂತರ ಸಿಂಜೆಮೈಯಲ್ಲಿ ಬಿಜೆಪಿ ಕಚೇರಿಯನ್ನು ಸುತ್ತುವರೆದಿತು, ಆದರೆ ಇದನ್ನೂ ಕೂಡ ಸೈನ್ಯ ಅಲ್ಲಿದ್ದ ಗುಂಪನ್ನು ಚದುರಿಸಿದೆ.
ಮಧ್ಯರಾತ್ರಿ ಇಂಫಾಲ್ ವೆಸ್ಟ್‌ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿ ಅವರ ನಿವಾಸಕ್ಕೆ ದಾಳಿ ಮಾಡಲು ಪ್ರಯತ್ನಿಸಿದೆ, ಆದರೆ ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆಯಿತು. ಹೀಗೆ ಅನೇಕ ಕಡೆ ಇಂತಹ ದಾಳಿಗಳನ್ನು ನಡೆಸಲು ಕೆಲವೊಂದು ಗುಂಪುಗಳು ಯತ್ನಿಸಿದೆ, ಆದರೆ ಇದನ್ನೂ ಸೇನೆ ಜವಾಬ್ದಾರಿಯುತವಾಗಿದೆ ನಿಭಾಯಿಸಿದೆ ಎಂದು ಹೇಳಲಾಗಿದೆ.
ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ವಿಪಿ ಮಲಿಕ್ (ನಿವೃತ್ತ) ಅವರು ಮೇ 3 ರಿಂದ ಮಣಿಪುರದಲ್ಲಿ ಮೈಟೈಸ್ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಜನಾಂಗೀಯ ಘರ್ಷಣೆಗಳು ನಡೆಯುತ್ತಿರುವ ಪರಿಸ್ಥಿತಿಗೆ “ತುರ್ತು ಗಮನ” ಬೇಕು ಎಂದು ಕರೆ ನೀಡಿದ್ದಾರೆ. ರಾಜ್ಯದಲ್ಲಿನ ಕರಾಳ ಪರಿಸ್ಥಿತಿಯ ಕುರಿತು ಮಣಿಪುರದ ನಿವೃತ್ತ ಹಿರಿಯ ಸೇನಾಧಿಕಾರಿಯೊಬ್ಬರು ಮಾಡಿದ ಟ್ವೀಟ್ನಲ್ಲಿ ಜನರಲ್ ಮಲಿಕ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ, “ಉನ್ನತ ಮಟ್ಟದಲ್ಲಿ ತುರ್ತು ಗಮನ ಹರಿಸಬೇಕು” ಎಂದು ಹೇಳಿದ್ದಾರೆ.