ಟಾಯ್ಲೆಟ್ನಲ್ಲಿ ಕುಳಿತ ವ್ಯಕ್ತಿ ಸಹಜವಾಗಿ ಮೇಲೆ ನೋಡಿದ್ದಾನೆ. ಭಯಂಕರ ಗಾತ್ರದ ಹೆಬ್ಬಾವೊಂದು ಶವರ್ ಮೇಲೆ ನೇತಾಡುತ್ತಿತ್ತು. ತಕ್ಷಣವೇ ಹಡ್ಸನ್ ಸ್ನೇಕ್ ಕ್ಯಾಚಿಂಗ್ಗೆ ಫೋನ್ ಮಾಡಿದ್ದಾನೆ. ಅಲ್ಲಿಯ ಆಂಥೋನಿ ಜಾಕ್ಸನ್ ಕೇವಲ ಒಂಬತ್ತು ನಿಮಿಷಗಳಲ್ಲಿ ಈ ವ್ಯಕ್ತಿಯ ಮನೆಗೆ ಧಾವಿಸಿದ್ದಾನೆ. ಆನಂತರ ಶವರ್ ಮೇಲಿಂದ ಕೇವಲ 30 ಸೆಕೆಂಡುಗಳೊಳಗೆ ಅದನ್ನು ನೆಲಕ್ಕಿಳಿಸಿದ್ದಾರೆ. ಈ ಘಟನೆಯ ಕುರಿತು ಫೇಸ್ಬುಕ್ನಲ್ಲಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.
“ಈ ಕಾರ್ಪೆಟ್ ಪೈಥಾನ್ ಸುಮಾರು 6 ಅಡಿ ಇತ್ತು. ಇಷ್ಟು ದೊಡ್ಡ ಹೆಬ್ಬಾವನ್ನು ಹಿಡಿಯುವುದೆಂದರೆ ಯಾರಿಗೂ ನಡುಕು ಹುಟ್ಟುತ್ತದೆ. ಅಲ್ಲದೆ ಅದು ನನ್ನನ್ನು ಕಚ್ಚಲು ಪ್ರಯತ್ನಿಸುತ್ತಿತ್ತು. ಪರಭಕ್ಷಕ ಜೀವಿಯಾದ ಇದಕ್ಕೆ ಕೆಳಗಿರುವ ನಾನು ಬೇಟೆಯಂತೆ ಕಂಡಿರಲು ಸಾಕು. ಆ ನಂತರ ಹುಕ್ನ ಸಹಾಯದಿಂದ ಅದನ್ನು ಕೆಳಗಿಳಿಸಿದೆ. ಅಬ್ಬಾ ಅದು ಬಹಳ ವಿಚಿತ್ರವಾಗಿ ಸುತ್ತಿಕೊಂಡಿತ್ತು.” ಎಂದಿದ್ದಾನೆ ಆಂಥೋನಿ ಜಾಕ್ಸನ್.
”ಕಾರ್ಪೆಟ್ ಪೈಥಾನ್ ವಿಷಪೂರಿತ ಜೀವಿಗಳಲ್ಲ. ಆದರೆ ಯಾರಾದರೂ ಅವುಗಳನ್ನು ಪ್ರಚೋದಿಸಿದರೆ, ತೊಂದರೆ ಮಾತ್ರ ಕಚ್ಚುತ್ತವೆ. ಇವು ಸುಮಾರು 13 ಅಡಿ ಉದ್ದದ ತನಕ ಬೆಳೆಯುತ್ತವೆ. ಟ್ಯಾಸ್ಮೇನಿಯಾ ಬಿಟ್ಟು ಆಸ್ಟ್ರೇಲಿಯಾದ ಎಲ್ಲಾ ಕಡೆ ಇವುಗಳು ಓಡಾಡಿಕೊಂಡಿರುತ್ತವೆ. ಅಲ್ಲದೆ ಚಳಿಗಾಲದಲ್ಲಿ ವಿಶ್ರಾಂತಿ ಪಡೆಯಲು ಇವು ಸುರಕ್ಷಿತ ಸ್ಥಳಗಳ ಹುಡುಕಾಟದಲ್ಲಿರುತ್ತವೆ. ಇನ್ನು ಚಾವಣಿಗಳಲ್ಲೇ ಇವು ಹೆಚ್ಚು ವಾಸಿಸುವುದು ಇಲಿಗಳ ಬೇಟೆಗಾಗಿ ” ಎಂದಿದ್ದಾನೆ ಆಂಥೋನಿ ಜಾಕ್ಸನ್.