ದಾಂಡೇಲಿ :ದಾಂಡೇಲಿ ನಗರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸೈಯಾಗಿ ಯಲ್ಲಪ್ಪ.ಎಸ್

ದಾಂಡೇಲಿ : ನಗರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸೈಯಾಗಿ ಯಲ್ಲಪ್ಪ.ಎಸ್ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ತನಿಖಾ ವಿಭಾಗದ ಪಿಎಸೈ ಪಿ.ಬಿ.ಕೊಣ್ಣೂರು ಅವರಿಂದ ತೆರವಾದ ಜಾಗಕ್ಕೆ ಯಲ್ಲಪ್ಪ.ಎಸ್ ಅವರನ್ನು ನಿಯೋಜಿಸಲಾಗಿತ್ತು.

ಶಿರಸಿ ಪೊಲೀಸ್ ಠಾಣೆಯಿಂದ ಯಲ್ಲಪ್ಪ.ಎಸ್ ಅವರು ದಾಂಡೇಲಿ ನಗರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದಾರೆ. ಈ ಹಿಂದೆ ದಾಂಡೇಲಿ ನಗರ ಠಾಣೆಯ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸೈಯಾಗಿ, ಆನಂತರ ತನಿಖಾ ವಿಭಾಗದ ಪಿಎಸೈಯಾಗಿ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.