ಬೈಕ್​ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ದುರ್ಮರಣ

ಕೊಡಗು:ಬೈಕ್​ ಅಪಘಾತದಲ್ಲಿ ಎಫ್ಎಂಸಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಮಡಿಕೇರಿಯ ಭಾವನಾ(21) ಮೃತ ವಿದ್ಯಾರ್ಥಿನಿ. ಭಾವನಾ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬುಲೆಟ್ ಬೈಕ್​ ಸ್ಕೂಟಿಗೆ ಅಪ್ಪಳಿಸಿದೆ. ಈ ವೇಳೆ ವಿದ್ಯಾರ್ಥಿನಿ ಮೃತಳಾಗಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.