2000 ರೂ. ನೋಟು ಖರ್ಚು ಮಾಡೋಕೆ ಜನ ಏನೇನೆಲ್ಲ ಮಾಡ್ತಿದ್ದಾರೆ? ಸಮೀಕ್ಷೆ ವರದಿ ಹೇಳಿದ್ದೀಗೆ..

ನವದೆಹಲಿ (ಜೂನ್ 14, 2023): 2,000 ರೂ ಮುಖಬೆಲೆಯ ನೋಟುಗಳು ಚಲಾವಣೆಯಿಂದ ರದ್ದಾದ ಬಳಿಕ ಇಂಧನ, ಆಭರಣ ಮತ್ತು ದಿನಸಿ ಖರೀದಿ ಮಾರ್ಗಗಳ ಮೂಲಕ ಸಾರ್ವಜನಿಕರು ತಮ್ಮಲ್ಲಿರುವ 2,000 ರೂ. ನೋಟುಗಳನ್ನು ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ವರದಿಯೊಂದು ತಿಳಿಸಿದೆ.

ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗದುಕೊಂಡ ಬಳಿಕ ತಮ್ಮಲ್ಲಿರುವ 2,000 ರೂ. ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲು, ಕಡಿಮೆ ಮೌಲ್ಯದ ನೋಟುಗಳೊಂದಿಗೆ ಬದಲಾಯಿಸಿಕೊಳ್ಳಲು ಹಾಗೂ ತಮ್ಮ ದೈನಂದಿನ ವ್ಯವಹಾರವನ್ನು ಅವುಗಳಿಂದಲೇ ವ್ಯವಹರಿಸಲು ಜನರು ಮುಂದಾಗಿದ್ದು ಈ ಪೈಕಿ ಈ ನೋಟುಗಳನ್ನು ಹೆಚ್ಚಾಗಿ ಇಂಧನಕ್ಕಾಗಿ, ಆಭರಣ ಖರೀದಿಗಾಗಿ ಹಾಗೂ ದಿನಸಿಗಳನ್ನು ಖರೀದಿ ಮಾಡಲು ಬಳಸುತ್ತಿದ್ದಾರೆ.