ರಾಧಿಕಾ ಕುಮಾರಸ್ವಾಮಿ ಜೊತೆ ‘ಲಚ್ಚಿ’ ಫೋಟೋ- ಕಿರುತೆರೆಗೆ ಮರಳಿದ್ರಾ ನಟಿ?

ಳು ಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ಅಜಾಗ್ರತ’ ಚಿತ್ರಕ್ಕೆ ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದು, ರಾಧಿಕಾ ಸಹೋದರ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಈ ನಡುವೆ ನಟಿ ರಾಧಿಕಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಶುಭಸುದ್ದಿ ನೀಡಿದ್ದಾರೆ.

ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅವರಿಗೆ ನಾಯಕಿಯಾಗಿ ರಾಧಿಕಾ ಅವರು ಕಾಣಿಸಿಕೊಳ್ತಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್‌ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ‘ದಮಯಂತಿ’ ಚಿತ್ರದ ಬಳಿಕ ನಟಿ ಬ್ರೇಕ್ ತೆಗೆದುಕೊಂಡಿದ್ದರು. ಈಗ ‘ಭೈರಾದೇವಿ’ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

ಇದೀಗ ‘ನಮ್ಮ ಲಚ್ಚಿ’ ಸೀರಿಯಲ್ ಖ್ಯಾತಿಯ ಲಚ್ಚಿ ಮತ್ತು ರಿಯಾ ಇಬ್ಬರು, ರಾಧಿಕಾ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತ ಫೋಟೋವನ್ನ ಬಾಲನಟಿ ಲಚ್ಚಿ ಅಲಿಯಾಸ್ ಸಾಂಘವಿ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಡ್ಯಾನ್ಸಿಂಗ್ ಶೋವೊಂದರಲ್ಲಿ ನಟಿ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಸದ್ದಿಲ್ಲದೇ ಲಚ್ಚಿ ಸೀರಿಯಲ್‌ಗೆ ಸಾಥ್ ನೀಡಿದ್ರಾ.? ಅತಿಥಿಯಾಗಿ ಎಂಟ್ರಿ ಕೊಟ್ರಾ ಎಂಬ ಕುತೂಹಲ ಮೂಡಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ.? ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ. 

ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ ʼಅಜಾಗ್ರತ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರೆ, ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದ್ದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು.