ಪೊಲೀಸ್‌ ತನಿಖೆ ಬಗ್ಗೆ ಮತ್ತೆ ರೆಸ್ಲ​ರ್‌​ಗಳ ಅಪ​ಸ್ವ​ರ! ರಾಜಿಯಾಗುವಂತೆ ಒತ್ತ​ಡ​: ಸಾಕ್ಷಿ ಮಲಿಕ್ ಗಂಭೀರ ಆರೋಪ

ನವ​ದೆ​ಹ​ಲಿ(ಜೂ.11): ಲೈಂಗಿಕ ಕಿರು​ಕುಳ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಭಾರ​ತೀಯ ಕುಸ್ತಿ ಫೆಡ​ರೇ​ಶನ್‌(ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರು​ದ್ಧದ ಪೊಲೀ​ಸರ ತನಿಖೆ ಬಗ್ಗೆ ದೇಶದ ಅಗ್ರ ಕುಸ್ತಿ​ಪ​ಟು​ಗಳು ಮತ್ತೊಮ್ಮೆ ಅಪ​ಸ್ವರ ಎತ್ತಿ​ದ್ದಾರೆ. ಈ ಬಾರಿ ಕುಸ್ತಿ​ಪ​ಟು​ಗಳ ಅಸ​ಮಾ​ಧಾ​ನ​ಕ್ಕೆ ಕಾರ​ಣ​ವಾ​ಗಿ​ದ್ದು ಬ್ರಿಜ್‌ಭೂಷಣ್‌ ತಮ್ಮ ಮನೆ​ಯಲ್ಲೇ ಇರು​ವಾಗ ಅವರ ಮನೆ ಆವರಣದಲ್ಲೇ ಇರುವ ಕಚೇರಿಗೆ ದೂರು​ದಾ​ರೆ​ಯನ್ನು ಕರೆ​ದೊಯ್ದು ಸ್ಥಳ ಪರಿಶೀಲನೆ ನಡೆ​ಸಿ​ದ್ದು ಬ್ರಿಜ್‌ ವಿರುದ್ಧ ದೆಹಲಿ ಪೊಲೀ​ಸ​ರಿಗೆ ಅಪ್ರಾಪ್ತೆ ಸೇರಿ​ದಂತೆ 7 ಮಂದಿ ದೂರು ದಾಖ​ಲಿ​ಸಿದ್ದು, 2 ಎಫ್‌​ಐ​ಆ​ರ್‌ ದಾಖ​ಲಾ​ಗಿ​ದೆ. ಈ ಬಗ್ಗೆ ತನಿಖೆ ಕೈಗೊಂಡಿ​ರುವ ಪೊಲೀ​ಸರು ದೂರು​ದಾರೆ ಕುಸ್ತಿ​ಪ​ಟು​ವೊ​ಬ್ಬ​ರನ್ನು ಬ್ರಿಜ್‌ರ ಅಧಿ​ಕೃ​ತ ಕಚೇ​ರಿ​ಗೆ ಕರೆ​ತಂದು ಸುಮಾರು ಒಂದೂ​ವ​ರೆ ಗಂಟೆ​ಗಳ ಕಾಲ ಘಟನೆ ಬಗ್ಗೆ ವಿವರ ಕೇಳಿ​ದ್ದರು. ಆದರೆ ಈ ಬಗ್ಗೆ ಕಿಡಿ​ಕಾ​ರಿ​ರುವ ಕುಸ್ತಿ​ಪಟು ಭಜ​ರಂಗ್‌ ಪೂನಿಯಾ, ‘ಬ್ರಿಜ್‌ ಮನೆ​ಯ​ಲ್ಲಿ​ದ್ದಾ​ಗಲೇ ದೂರು​ದಾ​ರೆ​ಯನ್ನು ಸ್ಥಳ ಪರಿ​ಶೀ​ಲ​ನೆಗೆ ಕರೆ​ದೊ​ಯ್ಯ​ಲಾ​ಗಿದೆ. ಸ್ಥಳಕ್ಕೆ ತೆರಳುವ ಮುನ್ನ ಕುಸ್ತಿ​ಪಟು, ಬ್ರಿಜ್‌ ಮನೆಯಲ್ಲಿ ಇದ್ದಾರಾ ಎಂದು ಪ್ರಶ್ನಿ​ಸಿ​ದಾಗ ಪೊಲೀ​ಸರು ಇಲ್ಲ ಎಂದು ಸುಳ್ಳು ಹೇಳಿ​ದ್ದಾರೆ. ಬಳಿಕ ಬ್ರಿಜ್‌ ಅಲ್ಲೇ ಇರು​ವುದು ತಿಳಿದು ದೂರುದಾರೆ ಹೆದರಿದ್ದಾಳೆ’ ಎಂದಿ​ದ್ದು, ಇಡೀ ವ್ಯವ​ಸ್ಥೆಯೇ ಬ್ರಿಜ್‌​ರನ್ನು ರಕ್ಷಿ​ಸು​ತ್ತಿದೆ ಎಂದು ಗಂಭೀರ ಆರೋಪ ಮಾಡಿ​ದ್ದಾರೆ.

ರಾಜಿಯಾಗುವಂತೆ ಒತ್ತ​ಡ​: ಸಾಕ್ಷಿ

ಪ್ರಕ​ರ​ಣ​ಕ್ಕೆ ಸಂಬಂಧಿ​ಸಿ​ದಂತೆ ರಾಜಿ ಮಾಡಿಕೊಳ್ಳುವಂತೆ ಭಾರೀ ಒತ್ತಡ ಇರು​ವು​ದಾಗಿ ಕುಸ್ತಿ​ಪಟು ಸಾಕ್ಷಿ ಮಲಿಕ್‌ ಆರೋ​ಪಿ​ಸಿ​ದ್ದಾರೆ. ‘ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಭಾರೀ ಒತ್ತಡವಿದೆ. ದೂರು ಹಿಂಪಡೆಯುವಂತೆ ಅಪ್ರಾಪ್ತೆಯ ತಂದೆ ಮೇಲೆಯೂ ಇನ್ನಿಲ್ಲದಂತೆ ಒತ್ತಡ ಹೇರಲಾಗಿದೆ. ಇದರಿಂದ ಅವರು ಖಿನ್ನತೆಗೆ ಒಳಗಾಗಿದ್ದಾರೆ. ಬ್ರಿಜ್‌ಭೂಷಣ್‌ರನ್ನು ಬಂಧಿ​ಸಿ​ದ್ದರೆ ಅಪ್ರಾ​ಪ್ತೆಯ ತಂದೆ ಹೇಳಿಕೆ ಬದ​ಲಿ​ಸು​ತ್ತಿ​ರ​ಲಿಲ್ಲ. ಬ್ರಿಜ್‌ ಬಂಧಿ​ಸದ ಹೊರತು ನಿಷ್ಪ​ಕ್ಷ​ಪಾತ ತನಿಖೆ ಸಾಧ್ಯ​ವಿ​ಲ್ಲ’ ಎಂದು ಸಾಕ್ಷಿ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾ​ರೆ.