ಧಾರವಾಡ: ಪೇಡಾನಗರಿ ಧಾರವಾಡದ ಮಾಳಮಡ್ಡಿಯಲ್ಲಿ ಸಾರ್ವಜನಿಕರು ಕೈಗೆ ಇಬ್ಬರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮಾಳಮಡ್ಡಿಯಲ್ಲಿ ಕಳ್ಳತನ ಹೆಚ್ಚಾಗಿತ್ತು. ಅಪಾರ್ಟ್ಮೆಂಟ್ಗಳಲ್ಲಿನ ಮನೆಗಳಿಗೂ ಕಳ್ಳರು ಕನ್ನ ಹಾಕುತ್ತಿದ್ದರು. ಈ ಹಿನ್ನೆಲೆ ಮಾಳಮಡ್ಡಿ ಜನ ಕಳೆದೆರಡು ದಿನಗಳಿಂದ ಜಾಗರೂಕರಾಗಿದ್ದು, ರಾತ್ರಿ ಹೊತ್ತು ಓಡಾಡುವವರ ಮೇಲೆ ಕಣ್ಣಿಟ್ಟು ಕಾಯುತ್ತಿದ್ದರು. ನಸುಕಿನ ಜಾವ ಕಳ್ಳರು ಬರುತ್ತಿದ್ದಂತೆಯೇ ಬೀದಿಗಿಳಿದ ಜನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಬ್ಬರಲ್ಲಿ ಓರ್ವ ಕಳ್ಳ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸರು ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಇನ್ನು ಕಳ್ಳರ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.