ಹಾವೇರಿ: ರಾಜ್ಯದ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳು ವಿದ್ಯುತ್ ಏರಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಶಾಕ್ ನೀಡಿದೆ. ರಾಜ್ಯಾದ್ಯಂತ ದುಪ್ಪಟ್ಟು ಕರೆಂಟ್ ಬಿಲ್ ಹೆಚ್ಚಳದಿಂದ ಜನರು ಬೇಸತ್ತಿದ್ದು, ಈ ವಿಚಾರವಾಗಿ ಇದೀಗ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೊಸ ಶಿಡೇನೂರು ಗ್ರಾಮದ ಜನರು ಒಟ್ಟುಗೂಡಿ, ಗಣೇಶನ ದೇವಸ್ಥಾನದಲ್ಲಿ ಸಭೆ ನಡೆಸಿ ಕರೆಂಟ್ ಬಿಲ್ ಕಟ್ಟಂಗಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಬಿಲ್ ಕಲೆಕ್ಟರ್ ಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು
ಕರೆಂಟ್ ಬಿಲ್ ಹೆಚ್ಚಳದಿಂದ ರೈತರಿಗೆ ಸಂಕಷ್ಟವಾಗುತ್ತಿದೆ. ಇದರಿಂದ ಇದೀಗ ಜನರು ಒಟ್ಟಾಗಿ ಸಭೆ ನಡೆಸಿ, ಬಿಲ್ ಕಲೆಕ್ಟರ್ಗೆ ಬಹಿಷ್ಕಾರ ಹಾಕಿದ್ದಾರೆ. ನಮ್ಮೂರಿಗೆ ಬಿಲ್ ಕಲೆಕ್ಟರ್ ಬರುವಂಗಿಲ್ಲ, ಬಿಲ್ ಹಾಕುವಂಗಿಲ್ಲ. ಒಂದು ವೇಳೆ ಬಿಲ್ ಕಲೆಕ್ಟರ್ ಬಂದ್ರೆ, ಆತನನ್ನು ಹೊಡೆದು ಒಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.