ಹಳಿಯಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ ಹಳಿಯಾಳ ಹಾಗೂ ಮುರ್ಕವಾಡ ಸರಕಾರಿ ಪಬ್ಲಿಕ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗೆ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಪ ವಲಯಾರಣ್ಯಾಧಿಕಾರಿ ಸಂತೋಷ್ ಅವರು ನಮಗೆ ಬದುಕಲು ಅನ್ನ ನೀರು ಎಷ್ಟು ಮುಖ್ಯವೊ ಅಷ್ಟೆ ಉಸಿರಾಟಕ್ಕೆ ಗಾಳಿಯೂ ಮುಖ್ಯ. ಸ್ವಚ್ಚ ಗಾಳಿ ಬೇಕಾದರೇ ಸಮೃದ್ದ ಪರಿಸರವಿರಬೇಕು. ಸಮೃದ್ಧ ಪರಿಸರ ನಿರ್ಮಾಣದ ಗುರಿಯನ್ನಿಟ್ಟು ನಾವು ನೀವೆಲ್ಲರು ಮುನ್ನಡೆದಾಗ ಮಾತ್ರ ಸಮೃದ್ಧ ಪರಿಸರ ಉಳಿಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಕೃಷಿ ಅಧಿಕಾರಿ ವಿಠ್ಠಲ್ ಪೂಜಾರ್ ,ಶಾಲಾ ಮುಖ್ಯೋಪಾಧ್ಯಯಿನಿ ಪೂರ್ಣಿಮಾ ನಾಯಕ್, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕ ವಿದ್ಯಾಸಾಗರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದದವರು, ಸ್ವಸಹಾಯ ಸಂಘಗಳ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.