ಹಳಿಯಾಳ :ಹಳಿಯಾಳ ತಾಲೂಕು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿ ಸತ್ಯಜೀತ್ ಗಿರಿ ನೇಮಕ

ಹಳಿಯಾಳ : ಹಳಿಯಾಳ ತಾಲೂಕು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡರಾದ ಸತ್ಯಜೀತ್ ಗಿರಿಯವರನ್ನು ನೇಮಕ ಮಾಡಲಾಗಿದೆ.

ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ಸತೀಶ್.ಪಿ.ನಾಯ್ಕ ಅವರು ನೇಮಕಾತಿ ಪತ್ರವನ್ನು ಸತ್ಯಜೀತ್ ಗಿರಿಯವರಿಗೆ ವಿತರಿಸಿದರು. ಶಾಸಕರಾದ ಆರ್.ವಿ.ದೇಶಪಾಂಡೆಯವರ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪನವರ ಅನುಮೋದನೆಯ ಮೇರೆಗೆ ಸತ್ಯಜೀತ್ ಗಿರಿಯವರನ್ನು ನೇಮಕ ಮಾಡಲಾಗಿದೆ.