ಮಂಗಳೂರು- ಅಹಮದಾಬಾದ್​​ಗೆ ಜೂನ್ 9ರಿಂದ ವಿಶೇಷ ರೈಲು ಸೇವೆ

ಮಂಗಳೂರು: ಮಂಗಳೂರಿಗೆ ವಿಶೇಷ ರೈಲು ಸಂಚಾರಿಸಲಿದೆ, 09424 ಸಂಖ್ಯೆಯ ರೈಲು ಮತ್ತು 09423 ಸಂಖ್ಯೆಯ ರೈಲು ಅಹಮದಾಬಾದ್-ಮಂಗಳೂರು ಜೆಎನ್-ಅಹಮದಾಬಾದ್ ವೀಕ್ಲಿ ಸ್ಪೆಷಲ್ ವಿಶೇಷ ದರದಲ್ಲಿ ಈ ರೈಲು ಸಂಚಾರ ನಡೆಸಲಿದೆ. ಈಗಾಗಲೇ ಒಡಿಶಾದಲ್ಲಿ ನಡೆದ ಘಟನೆಗಳು ಒಂದು ದೊಡ್ಡ ಪರಿಣಾಮವನ್ನು ಉಂಟು ಮಾಡಿದೆ. ಅದಕ್ಕೆ ರೈಲುಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪಶ್ಚಿಮ ರೈಲ್ವೆಯ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಅದರಂತೆ 09424 ಸಂಖ್ಯೆಯ ರೈಲು ಶುಕ್ರವಾರದಂದು (ಜೂನ್ 9, 16 ಮತ್ತು 23) ಸಂಜೆ 4 ಗಂಟೆಗೆ ಅಹಮದಾಬಾದ್‌ನಿಂದ ಹೊರಟು ಮರುದಿನ ರಾತ್ರಿ 7.40ಕ್ಕೆ ಮಂಗಳೂರು ತಲುಪಲಿದೆ, ಹಾಗೆ 09423 ಸಂಖ್ಯೆಯ ರೈಲು ಶನಿವಾರದಂದು (ಜೂನ್ 10, 17 ಮತ್ತು 24) ರಾತ್ರಿ 9.10 ಕ್ಕೆ ಮಂಗಳೂರಿನಿಂದ ಹೊರಟು ಮೂರನೇ ದಿನ 1.15 ಕ್ಕೆ ಅಹಮದಾಬಾದ್ ತಲುಪುತ್ತದೆ.

ಇದು ನಾಡಿಯಾಡ್, ಆನಂದ್, ವಡೋದರಾ, ಭರೂಚ್, ಸೂರತ್, ವಾಪಿ, ವಸಾಯಿ ರಸ್ತೆ, ಪನ್ವೇಲ್, ರೋಹಾ, ರತ್ನಗಿರಿ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್, ಕರ್ಮಾಲಿ, ಮಡಗಾಂವ್ ಜೆಎನ್, ಕಾರವಾರ, ಉಡುಪಿ ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಅನೇಕ ಜನರು ಈ ರೈಲು ಸೇವೆಯನ್ನು ಬುಕ್​​​ ಮಾಡಿದ್ದು, ಇದು ಮಂಗಳೂರಿನಿಂದ ಅಹಮದಾಬಾದ್​​ಗೆ ಹೋಗುವ ಜನರಿಗೆ ಹೆಚ್ಚು ಅನುಕೂಲವಾಗಿದೆ.

.