ಮಂಕಾಳು ವೈದ್ಯ
ಭಟ್ಕಳ್ ; ಕಾಂಗ್ರೇಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂದು ಮೀನುಗಾರಿಕಾ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಹೇಳಿದರು..
ತಾಲೂಕಿನ ಗುಣವಂತೆ ಒಕ್ಕಲಿಗರ ಸಭಾಭವನದಲ್ಲಿ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ , ಹಿತೈಷಿಗಳಿಗೆ ಮಂಕಿ ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಈಗ ನಿಶ್ವಿಂತೆಯಿಂದ ಒಬ್ಬ ಬಡವ ಮನೆ ಕಟ್ಟುತ್ತಾನೆ, ಒಬ್ಬ ಬಡ ವಿದ್ಯಾರ್ಥಿ ಅಮೇರಿಕಾದಲ್ಲಿ ಶಿಕ್ಷಣ ಮುಗಿಸಲು ಸಾದ್ಯವಾಗುತ್ತದೆ. ಜನ ಸುರಕ್ಷಿತವಾಗಿ , ಸಪರ್ಪಕವಾಗಿ ಏನು ಬೇಕಾದರು ಮಾಡಲು ಮಂಕಾಳು ವೈದ್ಯರಿಂದ ಸಾಧ್ಯ ಆಗುತ್ತದೆ ಎಂದು ನನ್ನಲ್ಲಿ ಶಕ್ತಿ ತುಂಬಿದ್ದಾರೆ. ನಾವು ಎಷ್ಟು ವರ್ಷ ಬದುಕುತ್ತೇವೆ . ಎನ್ನುವುದಕ್ಕಿಂತ ಬದುಕಿದ್ದಾಗ ಎಷ್ಟು ಜನರಿಗೆ ಸಹಾಯ ಮಾಡಬಹುದು ಎನ್ನುವುದು ಮನಸ್ಸಿನಲ್ಲಿ ಇಟ್ಟುಕೊಂಡೆ ರಾಜಕಾರಣದಲ್ಲಿದ್ದವನು ನಾನು .
ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡಬೇಕು ಎನ್ನುವುದು ನನ್ಜ ಉದ್ದೇಶವಾಗಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಕಾರ್ಯಕರ್ತರಿಗೆ , ಜನರಿಗೆ ತೊಂದರೆ ಕೊಡುತ್ತಿದ್ದಾರೆ. ಅಂತವರು ರಾಜಕೀಯವಾಗಿ ಬೆಳೆಯುವುದ ಕಷ್ಟ ಎಂದರು. ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಶ್ರಮಿಸಿದ್ದಾರೆ. ಮಧ್ಯ ರಾತ್ರಿ ಸಮಯದಲ್ಲಿ ಸಹಾಯ ಹಸ್ತ ಕೇಳಿದರು, ಖಂಡಿತವಾಗಿಯೂ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದರು. ಯಾರು ಸಹ ನಮ್ಮ ಅಧಿಕಾರವನ್ನು ದುರ್ಬಳಕೆ ಮಾಡಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ನನ್ನ ಅಧಿಕಾರ ಎನ್ನುವುದು ಬಡವರಿಗಾಗಿ, ಕಷ್ಟದಲ್ಲಿರುವವರಿಗೆ ಮೀಸಲಿಡುತ್ತೇನೆ. ಆದರೆ ಯಾರಿಗೂ ದರ್ಪ ತೋರಿಸಲಾಗಲಿ, ತೊಂದರೆ ನೀಡಿದರು ಅದನ್ನು ನಾನು ಸಹಿಸುವುದಿಲ್ಲ. ಸರ್ಕಾರಿಂದ ಬರುವ ನನ್ನ ಸಂಬಳವನ್ನು ಬಡವರಿಗಾಗಿ ಹಾಗೂ ಶಿಕ್ಷಣಕ್ಕಾಗಿ ಮೀಸಲಿಡುತ್ತೇನೆ ಎಂದರು..