ಇಂದು ಕಾಂಗ್ರೆಸ್ ಪಕ್ಷದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಮಂಕಾಳ ಎಸ್ ವೈದ್ಯ ಅವರನ್ನು ಶಿರಸಿ ಮೊಗೇರ ಸಮಾಜ ಸಂಘವು ನಗರ ಪೋಷ್ಟ್ ಆಪೀಸ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿತು. ಈ ಸಮಯದಲ್ಲಿ ಮಾತನಾಡಿದ ಮೊಗೇರ ಸಮಾಜ ಸಂಘ ದ ಉಪಾಧ್ಯಕ್ಷ ರಾಜು ನರಸಿಂಹ ಉಗ್ರಾಣಕರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಜನಾನುರಾಗಿ ನಾಲ್ಕು ಶಾಸಕರು ಆಯ್ಕೆಯಾಗಿದ್ದಾರೆ. ಅವರಲ್ಲಿ ನಮ್ಮ ಸಮಾಜದ ಮಂಕಾಳ್ ವೈದ್ಯವರಿಗೆ ಸಚಿವ ಸ್ಥಾನ ನೀಡಿರುವುದು ನಮಗೆ ಹೆಮ್ಮೆಯ ಸಂಗತಿ. ಅವರನ್ನು ಸಚಿವರನ್ನಾಗಿ ಮಾಡಿದ ಎ ಐ ಸಿ ಸಿ ಅಧ್ಯಕ್ಷರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಶ್ರೀಮತಿ ಸೋನಿಯಾ ಗಾಂಧಿ,ರಾಹುಲ ಗಾಂಧಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರು ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು.
ಹಿಂದೆ ಪೀ ಎಸ್ ಜೈವಂತ ಸಚಿವರಾದ ನಂತರ ಇದೀಗ ನಮ್ಮ ಸಮಾಜಕ್ಕೆ ಈ ಅವಕಾಶ ಕೂಡಿ ಬಂದಿದೆ. ಶಿರಸಿ ಸಿದ್ದಾಪುರ ಸಚಿವರಾದ ಮಾನ್ಯ ಭೀಮಣ್ಣ ನಾಯ್ಕ ಕೂಡ ಜಾನಾನುರಾಗಿ ಶಾಸಕರಾಗಿದ್ದಾರೆ. ಜನರು ಕೇವಲ ರಾಜಕೀಯವನ್ನು ಅಲ್ಲದೆ ಜನ ಸ್ಪಂದನ ವ್ಯಕ್ತಿಗಳನ್ನು ಈ ಸಾರೆ ಆಯ್ಕೆ ಮಾಡಿದ್ದಾರೆ. ಶ್ರೀ ಮಂಕಾಳು ವೈದ್ಯರಿಗೆ ಶ್ರೀ ಮಾರಿಕಾಂಬಾ ದೇವಿಯು ಇನ್ನೂ ಹೆಚ್ಚಿನ ಅವಕಾಶ ನೀಡಲಿ ಎಂದು ಆಶಿಸಿದರು.
ಈ ಸಮಯದಲ್ಲಿ ತಾಲೂಕಾ ಸಂಘದ ಅಧ್ಯಕ್ಷ ಸಂಘದ ಅಧ್ಯಕ್ಷ ಗಣೇಶ್ ಜೈವಂತ,ಪ್ರಕಾಶ್ ಜೈವಂತ,ಪ್ರದೀಪ್ ಶೆಟ್ಟಿ, ಶ್ರೀಧರ ಮೊಗೇರ,ಸುಮಾ ಉಗ್ರಾನಕರ್,ಶಕುಂತಲಾ ಜೈವಂತ,ಮೋಹಿನಿ ಬೈಲೂರು,ತಾರ ನಾಯ್ಕ.ದೇವಿದಾಸ ಕರ್ಕಿ, ವಿನಾಯಕ ನೀಲೇಕಣಿ,ಕುಮಾರ ಬೇಳ್ಳೆಮನೆ,ಕೃಷ್ಣ ಗುಂಡು,ಪವನ್ ಮುಡ್ಕಣಿ, ಶ್ರೀಧರ್ ನಾಯ್ಕ,ರಾಜೇಶ್ ಕೆರೇಕರ್, ಮುಂತಾದವರು ಭಾಗವಹಿಸಿದ್ದರು.