ಸಿದ್ದರಾಮಯ್ಯ ಸಂಪುಟ ಸಚಿವರಿಗೆ ಖಾತೆಗಳ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

ಬೆಂಗಳೂರು: ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ (Congress) ಹೈಕಮಾಂಡ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದೆ. ಇದೊಂದಿಗೆ ಹಳಬರು ಹಾಗೂ ಹೊಸಬರನ್ನು ಒಳಗೊಂಡ ಸಿದ್ದರಾಮಯ್ಯನವ ಸರ್ಕಾರದ ಪರಿಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ಇದೀಗ ಯಾರಿಗೆ ಯಾವ ಖಾತೆ? ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ? ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ಯಾರಿಗೆ ಯಾವ ಖಾತೆ ಎನ್ನುವುದು ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಮಾತುಗಳು ನಡೆದಿದ್ದು, ಹಂಚಿಕೆ ಮಾಡಿರುವ ಎನ್ನಲಾದ ಪಟ್ಟಿಯೊಂದು ವೈರಲ್ ಆಗಿದೆ. ಇದರ ಪ್ರಕಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿರೀಕ್ಷಿಸಿದಂತೆ ಪ್ರಬಲ ಖಾತೆಗಳನ್ನೇ ತೆಗೆದುಕೊಂಡಿದ್ದಾರೆ. ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ಯಾರಿಗೆ ಯಾರಿಗೆ ಯಾವ ಖಾತೆ ಎನ್ನುವ ವಿವರ ಇಲ್ಲಿದೆ ನೋಡಿ.

ಯಾರಿಗೆ ಯಾವ ಖಾತೆ?
• ಸಿದ್ದರಾಮಯ್ಯ , ಸಿಎಂ , ಹಣಕಾಸು, ಗುಪ್ತಚರ ಇಲಾಖೆ
• ಡಿ.ಕೆ.ಶಿವಕುಮಾರ, ಡಿಸಿಎಂ, ಜಲಸಂಪನ್ಮೂಲ ಸಚಿವ, ಬೆಂಗಳೂರು ನಗರಾಭಿವೃದ್ದಿ
• ಪರಮೇಶ್ವರ್ -ಗೃಹ ಖಾತೆ
• ಹೆಚ್.ಕೆ.ಪಾಟೀಲ್,- ಕಾನೂನು ಮತ್ತು ಸಂಸದೀಯ
• ಕೆ.ಹೆಚ್.ಮುನಿಯಪ್ಪ-ಆಹಾರ ಮತ್ತು ನಾಗರಿಕ ಸರಬರಜು
• ಜಾರ್ಜ್ -ಇಂಧನ ಖಾತೆ
• ಎಂ.ಬಿ.ಪಾಟೀಲ್ – ಬೃಹತ್ ಕೈಗಾರಿಕೆ, ಐಟಿ ಬಿಟಿ
• ರಾಮಲಿಂಗಾ ರೆಡ್ಡಿ-ಸಾರಿಗೆ
• ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್
• ಜಮೀರ್ ಖಾನ್ – ವಸತಿ ಮತ್ತು ವಕ್ಫ್‌ ಬೋರ್ಡ್
• ಸತೀಶ್ ಜಾರಕಿಹೊಳಿ -ಲೋಕೋಪಯೋಗಿ ಖಾತೆ
• ಕೃಷ್ಣ ಭೈರೇಗೌಡ, -ಕಂದಾಯ
• ಚಲುರಾಯಸ್ವಾಮಿ -ಕೃಷಿ ಖಾತೆ
• ವೆಂಕಟೇಶ್, – ಪಶು ಸಂಗೋಪಾನ ಇಲಾಖೆ
• ಡಾ.ಹೆಚ್.ಸಿ.ಮಹದೇವಪ್ಪ -ಸಮಾಜ ಕಲ್ಯಾಣ ಇಲಾಖೆ
• ಈಶ್ವರ ಖಂಡ್ರೆ – ಅರಣ್ಯ ಇಲಾಖೆ
• ಕೆ.ಎನ್.ರಾಜಣ್ಣ,-ಸಹಕಾರ
• ದಿನೇಶ್ ಗುಂಡೂರಾವ್ -, ಆರೋಗ್ಯ ಕುಟಂಬ ಕಲ್ಯಾಣ ಇಲಾಖೆ ಖಾತೆ
• ಶರಣಬಸಪ್ಪ ದರ್ಶನಾಪುರ, – ಸಣ್ಣ ಕೈಗಾರಿಕೆ ಖಾತೆ
• ಶಿವಾನಂದ ಪಾಟೀಲ್ -ಸಕ್ಕರೆ ಖಾತೆ
• ಆರ್.ಬಿ.ತಿಮ್ಮಾಪುರ, -ಅಬಕಾರಿ ಮತ್ತು ಮುಜರಾಯಿ
• ಎಸ್.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂ ವಿಜ್ಞಾನ ಖಾತೆ
• ಶಿವರಾಜ ತಂಗಡಗಿ, -ಹಿಂದುಳಿದ ಆಯೋಗ
• ಡಾ.ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
• ಮಂಕಾಳು ವೈದ್ಯ, -ಮೀನುಗಾರಿಕೆ ಬಂದರು
• ಲಕ್ಷ್ಮೀ ಹೆಬ್ಬಾಳ್ಕರ್, -ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
• ರಹೀಂ ಖಾನ್- ಪೌರಾಡಳಿತ
• ಡಿ.ಸುಧಾಕರ್, -ಮೂಲ ಸೌಕರ್ಯ
• ಸಂತೋಷ ಲಾಡ್ – ಕಾರ್ಮಿಕ ಖಾತೆ
• ಬೋಸರಾಜು- ಪ್ರವಾಸೋದ್ಯಮ ಖಾತೆ
• ಬಿ.ಎಸ್.ಸುರೇಶ್,-ನಗರಾಭಿವೃದ್ದಿ ಖಾತೆ
• ಮಧು ಬಂಗಾರಪ್ಪ, -ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
• ಎಮ್ ಸಿ ಸುಧಾಕರ್ – ವೈದ್ಯಕೀಯ ಶಿಕ್ಷಣ ಸಚಿವ
• ಬಿ.ನಾಗೇಂದ್ರ -ಕ್ರೀಡಾ ಸಚಿವ
ಯಾರಿಗೆ ಯಾವ ಖಾತೆ ಎನ್ನುವುದರ ಒಂದು ಪಟ್ಟಿ ವೈರಲ್ ಆಗಿದೆ. ಆದ್ರೆ, ಈ ಬಗ್ಗೆ ಸರ್ಕಾರ ಯಾವುದೇ ಅಧಿಕೃತವಾಗಿಲ್ಲ ಹೇಳಿಲ್ಲ. ಆದರೆ ಇದೆ ಅಂತಿಮ ಎನ್ನಲಾಗುತ್ತಿದೆ.