194 ಪ್ರಯಾಣಿಕರಿದ್ದ ವಿಮಾನ ಆಗಸದಲ್ಲಿ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಗಿಲು ತೆರೆದುಕೊಂಡಿತು! ಮುಂದೇನಾಯಿತು?

ಪ್ರಯಾಣಿಕರ ವಿಮಾನಗಳಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಅಚಾತುರ್ಯಗಳು, ಅವಾಂತರಗಳು, ಅವಘಡಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣ ಕೊರಿಯಾದಲ್ಲಿ ಪ್ರಯಾಣಿಕರ ವಿಮಾನವೊಂದು ಆಗದಲ್ಲಿ ಹಾರುತ್ತಿರುವಾಗ ಬಾಗಿಲು ತೆರೆದು ಸಂಚಲನ ಮೂಡಿಸಿದೆ! ಇದ ಕಂಡು ಪ್ರಯಾಣಿಕರು ಗಾಬರಿಗೆ ಬಿದ್ದರು. ವಿವರಗಳಿಗೆ ಹೋಗುವುದಾದರೆ ಏಷ್ಯಾನಾ ಏರ್‌ಲೈನ್ಸ್ ಏರ್‌ಬಸ್ A321 ವಿಮಾನವು (Asiana Airlines Airbus A321 aircraft) ದಕ್ಷಿಣ ಕೊರಿಯಾದ (South Korea) ಡೇಗುವಿನಿಂದ ಜೆಜು ದ್ವೀಪಕ್ಕೆ (Daegu International Airport in Daegu) ಹೋಗಬೇಕಿತ್ತು. ಆ ವಿಮಾನದಲ್ಲಿ ಸುಮಾರು 194 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ವಿಮಾನವು ಡೇಗುವಿನಿಂದ ಜೆಜು ತಲುಪಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಈ ಮಧ್ಯೆ ಅದು ಆಗಸದಲ್ಲಿ ಸಾಗುತ್ತಿದ್ದಾಗ ವ್ಯಕ್ತಿಯೊಬ್ಬರು ಏಕಾಏಕಿ ತುರ್ತು ನಿರ್ಗಮನದ ಬಾಗಿಲನ್ನು ತೆರೆದು ಇಟ್ಟಿದ್ದಾರೆ. ಅದು ಈಗ ಖುಲ್ಲಂಖುಲ್ಲಾ ಚರ್ಚೆಗೆ ಗ್ರಾಸವಾಗಿದೆ.

ವಿಮಾನದಲ್ಲಿದ್ದ ಪ್ರಯಾಣಿಕರು ಬಾಗಿಲು ತೆರೆಯದಂತೆ ತಡೆಯಲು ಯತ್ನಿಸಿದರು. ಆದಾಗ್ಯೂ, ಆ ಪ್ರಯಾಣಿಕನೊಬ್ಬ ಬಾಗಿಲು ತೆರೆದುಬಿಟ್ಟರು. ಇದರಿಂದ ವಿಮಾನದೊಳಕ್ಕೆ ಬಲವಾದ ಗಾಳಿ ಬೀಸಿದ್ದು, ಪ್ರಯಾಣಿಕರು ಭಯಭೀತರಾಗಿದ್ದಾರೆ. ಆದರೆ ಯಾರಿಗೂ ಗಾಯವಾಗಿಲ್ಲ. ಏನೂ ಅನಾಹುತವಾಗಿಲ್ಲ.