13 ವರ್ಷಗಳಿಂದ ಕಾರವಾರದ ಬಂದರಿನಲ್ಲಿದ್ದ ಕಬ್ಬಿಣದ ಅದಿರಿಗೆ ಕೊನೆಗೂ ಮುಕ್ತಿ

ಕಾರವಾರ(Karwar) ಬಂದರಿನಲ್ಲಿ ಬರೋಬ್ಬರಿ 13 ವರ್ಷಗಳಿಂದ ರಫ್ತಾಗದೆ ಹಾಗೆ ಉಳಿದಿದ್ದ 37,320 ಮೆ.ಟನ್ ಕಬ್ಬಿಣದ ಅದಿರನ್ನ(Iron ore) ಕೊನೆಗೂ ಚೀನಾದ(China) ಹಡಗು ಹೊತ್ತು ಸಾಗಿದೆ‌. ಎಸ್ ಕಳೆದ 2010 ರಲ್ಲಿ ಕಾರವಾರದ ಬಂದರಿನಲ್ಲಿ ಅಕ್ರಮ ಅದಿರು ಸಾಗಾಟ ನಡೆಯುತ್ತಿದೆ ಎಂಬ ದೂರಿನ ಮೇರೆಗೆ, ಬಂದರಿನಲ್ಲಿದ್ದ ಕಬ್ಬಣದ ಅದಿರನ್ನ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿರೇರಿತ್ತು, ಆಗ ಸುಪ್ರೀಂ ಕೋರ್ಟ್ ಕರ್ನಾಟಕದ ಅದಿರನ್ನ ಎಲ್ಲಿಗೂ ರಫ್ತಾಗದಂತೆ ನಿಷೇಧಿಸಿ ಆದೇಶ ಮಾಡಿತ್ತು. ಆಗ ಕಾರವಾರ ಬಂದರಿನಲ್ಲಿ ಸಂಗ್ರಹವಾಗಿದ್ದ 18 ರಾಶಿ ಅದಿರು ಅಂದರೆ ಅಂದಾಜು 50 ಸಾವಿರ ಮೆಟ್ರಿಕ್ ಟನ್ ನಷ್ಟು ಅದಿರು ಬಂದರಿನಲ್ಲಿ ಉಳಿದಿತ್ತು. ಪ್ರಸ್ತುತ 18 ರಾಶಿ ಅದಿರಿನಲ್ಲಿ 16 ರಾಶಿ ಅಂದರೆ 37,320 ಮೆಟ್ರಿಕ್ ಟನ್ ಅದಿರನ್ನ ಮಂಗಳೂರು ಮೂಲದ ಗ್ಲೋರಿ ಶಿಪ್ಪಿಂಗ್ ಎನ್ನುವ ಸಂಸ್ಥೆ ಹರಾಜಿನಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಅದಿರನ್ನ ವಿಶೇಷ ಅನುಮತಿ ಪಡೆದು ಮೇ 15 ರಂದು ಚೀನಾದಿಂದ ಆಗಮಿಸಿದ್ದ ಎಂ.ವಿ.ನೋಟೋಸ್ ವೆಂಚುರ್ ಎಂಬ ಹೆಸರಿನ ಹಡುಗಿನಲ್ಲಿ ಮೇ 22 ಕ್ಕೆ ಸಾಗಾಟಮಾಡಿದೆ‌. ಈ ಮೂಲಕ 13 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಕಾರವಾರ ಬಂದರಿನಿಂದ ಅದಿರು ವಿದೇಶಕ್ಕೆ ರಫ್ತಾದಂತಾಗಿದೆ.

ಇನ್ನೂ 18 ರಾಶಿ ಕಬ್ಬಿಣ ಅದಿರಿನಲ್ಲಿ 16 ರಾಶಿ ಅದಿರನ್ನ ಮಂಗಳೂರು ಮೂಲದ ಗ್ಲೋರಿ ಶೀಪ್ಟಿಂಗ್‌ನವರು ಪಡೆದುಕೊಂಡು ಚೀನಾಕ್ಕೆ ರಪ್ತು ಮಾಡಿದರೆ. ಉಳಿದ 2 ರಾಶಿ ಅಂದರೆ 25,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನ ವೇದಾಂತ ಸೆಸೆಗೋವಾದವರು ಪಡೆದುಕೊಂಡಿದ್ದಾರೆ. ಆದರೆ ಈ ಕಂಪನಿಯವರು ಹಣವನ್ನ ಪಾವತಿ ಮಾಡಿಲ್ಲ. ಹೀಗಾಗಿ ಹರಾಜಾಗಿರುವ ಅದಿರು ಬಂದರಿನಲ್ಲಿದೆ. 75 ಲಕ್ಷ ರೂ ಹಣವನ್ನ ಪಾವತಿಸಿದ ನಂತರ ವೇದಾಂತ ಸೆಸೆಗೋವಾ ಕಂಪನಿ ಬಾಕಿ ಉಳಿದ ಅದಿರನ್ನ ರಪ್ತು ಮಾಡುತ್ತದೆ‌.
ಪ್ರಕರಣದ ಹಿನ್ನಲೆ
ಕಾರವಾರ ಬಂದರಿನಲ್ಲಿ 2003 ರಿಂದ 2010 ರ ವರಗೆ ಕಬ್ಬಿಣದ ಅದಿರನ್ನ ಎಕ್ಸ್‌ಪೋಟ್೯ ಮಾಡಲಾಗುತ್ತಿತ್ತು. ಇಲ್ಲಿ ಅಕ್ರಮ ಅದಿರು ಚಟುವಟಿಕೆ ನಡೆಯುತ್ತಿದೆ ಎಂದು 2010 ರಲ್ಲಿ ದೂರು ದಾಖಲಾದ ನಂತರ ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರದ ಬಂದರಿನಲ್ಲಿ ಸಂಗ್ರಹವಾಗಿದ್ದ 18 ರಾಶಿಯ ಅಂದಾಜು 50 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನ ಜಪ್ತಿ ಮಾಡಿತು. ಆಗ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಸಮಗ್ರ ವಿವರ ಪಡೆದ ಸುಪ್ರೀಂ ಕೋರ್ಟ್ ಕರ್ನಾಟಕದ ಅದಿರು ಯಾವುದೇ ಕಾರಣಕ್ಕೂ ಎಲ್ಲೂ ರಫ್ತಾಗದಂತೆ ನಿಷೇಧಿಸಿ ಆದೇಶ ಮಾಡಿತು. ಕೋರ್ಟನ ಆದೇಶದ ನಂತರ ಅಕ್ರಮ ಅದಿರು ಬಂದರಿನಲ್ಲಿ ಕೊಳೆಯುತ್ತಾ ಬಿದ್ದಿತ್ತು.

ಜಪ್ತಿಯಾಗಿರುವ ಅದಿರು ನ್ಯಾಯ ಬದ್ಧವಾಗಿದೆ ಎಂದು ಯಾರು ಕೂಡ ನ್ಯಾಯಾಲಯದ ಮೊರೆ ಹೋಗಲಿಲ್ಲ. ಆದರೆ ರಾಜಮಹಲ್ ಸ್ಕೀಲ್ ಎನ್ನುವವರು ಮಾತ್ರ ತಮ್ಮ 18 ಸಾವಿರ ಮೆಟ್ರಿಕ್ ಟನ್ ನ್ಯಾಯ ಬದ್ಧವಾಗಿ ನಮಗೆ ಸೇರಬೇಕು ಎಂದು ದಾಖಲೆ ಸಮೇತ ನ್ಯಾಯಾಲಯದ ಮೊರೆ ಹೋಗಿದ್ದರು. ದಾಖಲೆ ಪರಿಶೀಲನೆ ಮಾಡಿ ಅದಿರು ರಫ್ತಿಗೆ ಅವಕಾಶ ನೀಡಿತು. ಆದರೆ ಉಳಿದವರು ನ್ಯಾಯಾಲಯದ ಮೊರೆ ಹೋಗದೆ ನಾವು ಬದುಕಿದ್ರೆ ಸಾಕು ಅಂತಾ ಸುಮ್ಮನೆ ಕುಳಿತರು.
ಹರಾಜು ಪ್ರಕ್ರಿಯೆ
2010 ರಲ್ಲಿ ಅದಿರು ಸಾಗಾಟಕ್ಕೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್ 2020 ಅಕ್ಟೋಬರ್ ನಲ್ಲಿ ನಿಷೇಧವನ್ನ ಹಿಂಪಡೆಯಿತು. ನಂತರದಲ್ಲಿ ಅಂದರೆ 2020 ಅಕ್ಟೋಬರ್ ನಿಂದ 2023 ರ ವರಗೆ ಜಿಲ್ಲಾ ಟಾಸ್ಕ ಪೋಸ್೯ನವರು ಜಪ್ತಿಯಾಗಿದ್ದ ಅದಿರನ್ನ ಹರಾಜು ಪ್ರಕ್ರಿಯೆಗೆ ಕರೆದರು. ಆದರೆ ಏಳು ಬಾರಿಯು ಹರಾಜು ಪ್ರಕ್ರಿಯೆಯಲ್ಲಿ ಗೋವಾದ ವೇದಾಂತ ಸೆಸೆಗೋವಾ ಕಂಪನಿ ಮಾತ್ರ ಭಾಗಿಯಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಕನಿಷ್ಟ 3 ಕಂಪನಿಗಳಾದರು ಭಾಗಿಯಾಗ ಬೇಕು ಎನ್ನುವ ನಿಯಮ ಇದೆ. ಹೀಗಾಗಿ ಹರಾಜಾಗದೆ ಅದಿರು ಹಾಗೆ ಬಿದ್ದುತ್ತು. ಆದರೆ ಜನವರಿ 20 ನೇ ತಾರೀಖು ಎಂಟನೆ ಬಾರಿಯ ಹರಾಜಿನಲ್ಲಿ ಮಂಗಳೂರಿನ ಗ್ಲೋರಿ ಶಿಪ್ಟಿಂಗ್ ಹಾಗೂ ಬಳ್ಳಾರಿ ಮೂಲದ ಜೆ‌ಎಸ್‌ಡಬ್ಲೂ, ಗೋವಾದ ವೇದಾಂತ ಸೆಸೆಗೋವಾ ಪಾಲ್ಗೊಂಡವು. ಸಂಜೆ ವೇಳೆಗೆ ಜೆಎಸ್‌ಡಬ್ಲು ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿಯಿತು. ನಂತರ 16 ರಾಶಿಯನ್ನ ಗ್ಲೋರಿ ಶಿಪ್ಟಿಂಗ್, 2 ರಾಶಿಯಲ್ಲ ವೇದಾಂತ ಸೆಸೆಗೋವಾ ಕಂಪನಿಗಳು ತಮ್ಮದಾಗಿಸೊಕೊಂಡವು.
ಕಾರವಾರ ಬಂದರಿನಲ್ಲಿ 13 ವರ್ಷಗಳಿಂದ ಗಾಳಿ, ಮಳೆ, ಬಿಸಿಲು ಧೂಳು, ಗಿಡ ಮರಗಳ ಮಧ್ಯೆ ಇದ್ದ ಅದಿರನ್ನ ಎರಡು ತಿಂಗಳುಗಳ ಕಾಲ ಸ್ವಚ್ಛಗೊಳಿಸಿ ರಪ್ತು ಮಾಡಲಾಗಿದೆ. 16 ರಾಶಿ ಅದಿರನ್ನ ಗ್ಲೋರಿ ಶಿಪ್ಟಿಂಗ್ ಕಂಪನಿ ನ್ಯಾಯಾಲಯಕ್ಕೆ 9 ಕೋಟಿ ರೂ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರಾಯಲ್ಟಿಯಾಗಿ 1.60 ಕೋಟಿ ರೂ ಹಣವನ್ನ ತುಂಬಿ ರಪ್ತು ಮಾಡಿದೆ. 2 ರಾಶಿ ಅದಿರನ್ನ ಪಡೆದಿರುವ ವೇದಾಂತ ಸೆಸೆಗೋವಾ ಕಂಪನಿ 75 ಲಕ್ಷ ರೂ ಹಣವನ್ನ ಪಾವತಿ ಮಾಡಬೇಕಿದೆ. ನಂತರದಲ್ಲಿ ರಪ್ತಿಗೆ ಅವಕಾಶವಿದೆ.