ಸಿದ್ದಾಪುರ : ತಾಲೂಕಿನ ಕಾನ ಗೋಡ್ ನಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ನಿರತರಾದ ಮಹಿಳೆಯರಿಗೆ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ಆರ್ಥಿಕ ಸಾಕ್ಷರತೆಯನ್ನು ನೀಡಲಾಯಿತು
ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಶಿವಶಂಕರ್ ರವರು ಬ್ಯಾಂಕಿನ ವ್ಯವಹಾರ, ಖಾತೆ ತೆರೆಯುವುದು,ಸಾಲ ಸೌಲಭ್ಯ, ಶಿಕ್ಷಣ ಹಾಗೂ ಸ್ವ ಉದ್ಯೋಗ ಸಾಲ ಸೌಲಭ್ಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು
ಈಗಾಗಲೇ ತಾಲೂಕಿನಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಸ್ವಉದ್ಯೋಗವನ್ನು ನಡೆಸುತ್ತಿದ್ದು ಸ್ವಾಲಂಬಿತರಾಗಿ ಬದುಕುತ್ತಿದ್ದಾರೆ ಆದರೆ ಹಲವು ಮಹಿಳೆಯರಿಗೆ ಇನ್ನು ಬ್ಯಾಂಕಿನ ವ್ಯವಹಾರ ಸಾಲ ಸೌಲಭ್ಯಗಳು ಕುರಿತು ಮಾಹಿತಿ ಇಲ್ಲ ನಮ್ಮ ಆರ್ಥಿಕ ಸಾಕ್ಷರತಾ ಕೇಂದ್ರದಲ್ಲಿ ಈ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು