ಕಲಬುರಗಿ: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಸೆನ್ ಪೊಲೀಸ್(CEN Police) ಠಾಣೆಯ ಕಾನ್ಸ್ಟೇಬಲ್ ಮುಕ್ಕಲಪ್ಪ ನಿಲಜೇರಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 13 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು 7 ಸಾವಿರ ಲಂಚ (Bribe) ಪಡೆಯುವಾಗ ರೆಡ್ ಹ್ಯಾಂಡ್ಯಾಗಿ ಬಲೆಗೆ ಬಿದ್ದಿದ್ದಾರೆ. ಹೌದು ಸೆನ್ ಪೊಲೀಸ್ ಠಾಣೆಯಲ್ಲಿ ಸಂಜನಾ ಬೀರಪ್ಪಾ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಕ್ಕಲಪ್ಪ. ಅರ್ಜಿ ತನಿಖೆಯಲ್ಲಿ ದೂರುದಾರರ ಹೆಸರು ಕೈ ಬಿಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ವೇಳೆ ಲೋಕಾಯುಕ್ತ ಎಸ್.ಪಿ ಎಆರ್ ಕರ್ನೂಲ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬಳಿಕ ಲಂಚ ಸ್ವಿಕರಿಸುತ್ತಿದ್ದ ಕಾನ್ಸಟೇಬಲ್ ಮುಕ್ಕಲಪ್ಪನನ್ನ ಬಂಧಿಸಲಾಗಿದೆ.