ಅಂಕೋಲಾ ತಾಲೂಕಿನ ಅಲಗೇರಿಯ ಗ್ರಾಮ ದೇವತೆಯಾದ ಶ್ರೀ ಸಣ್ಣಮ್ಮ ದೇವಿ ಹಾಗೂ ಬೊಮ್ಮಯ್ಯ ದೇವರ ಬಂಡಿಹಬ್ಬ ವಿಜ್ರೃಂಭಣೆಯಿAದ ಸಂಪನ್ನ

  ಅಂಕೋಲಾ:  ಶ್ರೀ ಶಾಂತಾದುರ್ಗಾ ದೇವರ ಕಿರಿಯ ತಂಗಿ ಎಂದೇ ಪ್ರತೀತಿ ಇರುವ ಶ್ರೀ ಸಣ್ಣಮ್ಮ ದೇವರ ಕಳಸವನ್ನ ಊರಿನಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು. ಅಪಾರ ಭಕ್ತ ಸಮೂಹ ಹೊಂದಿರುವ ಶ್ರೀ ದೇವರ ಬಂಡಿಹಬ್ಬಕ್ಕೆ ರಾಜ್ಯ ಹಾಗೂ ಅಂತರ್ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

     ಊರಿನ ತುಂಬೆಲ್ಲ ತಳಿರು ತೋರಣ, ಹೂವಿನ ಅಲಂಕಾರ, ರಂಗು ರಂಗಿನ ರಂಗೋಲಿಯನ್ನು ಹಾಕಿ ಶ್ರೀ ದೇವರ ಕಳಸವನ್ನ ವೈಭವೋ ಪ್ರೇರಿತವಾಗಿ  ಸ್ವಾಗತಿಸಲಾಯಿತು. ಗುನಗರಾದ ನಾಗರಾಜ ಚಂದ್ರು ಗುನಗಾ ರವರಿಂದ ಹೊರಲ್ಪಟ್ಟ ಶ್ರೀ ದೇವರ ಕಳಸವನ್ನ ರಾಟೆ ಚಪ್ರ ( ಹುಲ್ಲುಗಂಬ) ದಲ್ಲಿ ಕೂರಿಸಲಾಯಿತು. ಈ ಸಂದರ್ಭದಲ್ಲಿ ದೇವರ ದರ್ಶನವನ್ನು ಅಪಾರ ಜನಸ್ಥೋಮ ಕಣ್ತುಂಬಿಕೊAಡಿತು.

ಮೊಬೈಲ್ ಗಳ ಅಬ್ಬರ: ದೇವರು ರಾಟೆ ಚಪ್ಪರ ಹತ್ತುವ ಸಂದರ್ಭದಲ್ಲಿ ಯವಕರ ಕೈಯಲ್ಲಿದ್ದ ಮೊಬೈಲ್ ಗಳೇ ಹೆಚ್ಚಾಗಿ ರಾರಾಜಿಸುತ್ತಿದ್ದು ಗಮನ ಸೆಳೆಯಿತು.