ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದಾದ್ಯಂತ ಮಂಗಳವಾರ ನಸುಕಿನ ಜಾವದಿಂದಲೇ ವ್ಯಾಪಕ ಶೀತಗಾಳಿ ಉಂಟಾಗಿದೆ. ದೆಹಲಿಯ ಸಫ್ದರ್ಜಂಗ್ ನಲ್ಲಿ ಅತ್ಯಂತ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್ ಇಂದು ಮುಂಜಾನೆ ದಾಖಲಾಗಿದ್ದು, ಪಲಮ್ ನಲ್ಲಿ 8.30 ಕ್ಕೆ 7.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಅಲ್ಲದೇ ದಟ್ಟ ಮಂಜು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದಿಂದ 40 ವಿಮಾನಗಳ ಹಾರಾಟಕ್ಕೆ ವಿಳಂಬವಾಗಿದೆ. ಬೆಳಗ್ಗೆ 7 ಗಂಟೆಯವರೆಗೆ ವಿಮಾನಗಳನ್ನು ಬೇರೆಡೆಗೆ ತಿರುಗಿಸಲು ಕೂಡ ಸಾಧ್ಯವಾಗಿಲ್ಲ. ಇನ್ನೂ ಉತ್ತರ ಭಾರತದಲ್ಲಿ ಇಂದು ಹಲವು ರೈಲುಗಳ ಸಂಚಾರ ದಟ್ಟ ಮಂಜು, ಹವಾಮಾನದಲ್ಲಿ ಮುಸುಕು ಕವಿದಿದ್ದರಿಂದ ವ್ಯತ್ಯಯವಾಗಿದೆ. ರೈಲುಗಳ ಸಂಚಾರ ತಡವಾಗಿ ಆರಂಭವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. .