ದೆಹಲಿ: ಕಾರ್ಖಾನೆಯೊಂದರ ಲಿಫ್ಟ್ ಆಕಸ್ಮಿಕವಾಗಿ ಕುಸಿದು ಮೂವರು ಮೃತಪಟ್ಟಿರುವ ದುರ್ಘಟನೆ ಪಶ್ಚಿಮ ದೆಹಲಿಯ ನಾರಾಯಣ ಇಂಡಸ್ಟ್ರಿಯ ಪ್ರದೇಶದಲ್ಲಿ ನಡೆದಿದೆ. ಕಾರ್ಖಾನೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುವ ಕುಲ್ವಾಂತ್ ಸಿಂಗ್ (30), ದೀಪಕ್ ಕುಮಾರ್ (26), ಸನ್ನಿ (33) ಮೃತ ದುರ್ದೈವಿಗಳು.
ಇನ್ನೂ ಸುರಾಜ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ದೀನ್ ದಯಾಳ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫ್ಯಾಕ್ಟರಿಯಲ್ಲಿನ ಲಿಫ್ಟ್ ನಲ್ಲಿ ಹಲವು ಬಾರಿ ತಾಂತ್ರಿಕ ದೋಷ ಕಾಣಿಸಿಕೊಂಡರೂ ರಿಪೇರಿ ಮಾಡದೇ ಉಪಯೋಗಿಸುತ್ತಿದ್ದರು ಎನ್ನಲಾಗಿದೆ.
ಜ. 8 ರಂದು ದಿಢೀರ್ ಕುಸಿದ ಪ್ಪರಿಣಾಮ ನಾಲ್ವರಲ್ಲಿ ಮೂವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಫ್ಟ್ ಕುಸಿದು ಬಿದ್ದರೂ ಸುಮಾರು ಒಂದೂವರೆ ಗಂಟೆ ಕೆಲಸಗಾರರು ಒಳಗಿದ್ದರು. ಈ ವೇಳೆ ಅವರ ಮೊಬೈಲ್ ಫೋನಿನ ಸಿಗ್ನಲ್ ಕೂಡ ಕೆಲಸ ಮಾಡಿಲ್ಲ ಎನ್ನಲಾಗಿದೆ.