ಜಮ್ಮುಕಾಶ್ಮೀರ: ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನಾಪಡೆ ಇಬ್ಬರನ್ನು ಹತ್ಯೆಗೈದಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದರು.
ಹತ್ಯೆಯಾದ ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, 2 ಎಕೆ ಗನ್ಗಳು ಸೇರಿದಂತೆ ಸುಧಾರಿತ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಗುರುತು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವಾರ ರಜೌರಿಯ ಧಂಗ್ರಿ ಜಿಲ್ಲೆಯಲ್ಲಿ ಉಗ್ರರ ದಾಳಿಯಲ್ಲಿ ನಟ ಪ್ರಿನ್ಸ್ ಶರ್ಮಾ, ಅವರ ಸಹೋದರ ದೀಪಕ್ ಕುಮಾರ್ ಸೇರಿ 7 ಮಂದಿ ನಾಗರಿಕರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದರು. ಈ ಘಟನೆಯಾಗಿ ಕೇವಲ ಒಂದು ವಾರದ ನಂತರ ಬಾಲಾಕೋಟ್ ಸೆಕ್ಟರ್ನಲ್ಲಿ ನಡೆಸಿದ ಯಶಸ್ವಿ ಕಾರ್ಯಾಚರಣೆ ಇದಾಗಿದೆ.