ಉಡುಪಿ: ಬ್ರಹ್ಮಾವರದಲ್ಲಿ ಎನ್‌ಐಎ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಮಾಜ್ ಮುನೀರ್ ಸ್ನೇಹಿತ, ಇಂಜಿನಿಯರಿಂಗ್ ವಿದ್ಯಾರ್ಥಿ ರಿಶಾನ್ ಶೇಖ್ನನ್ನು ವಶಕ್ಕೆ ಪಡೆದಿದ್ದಾರೆ. ರೆಶಾನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಶೇಖ್ ಪುತ್ರನಾಗಿದ್ದಾನೆ.
ಎನ್‌ಐಎ ಇತ್ತೀಚೆಗೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಮತ್ತು ಶಿವಮೊಗ್ಗ ತುಂಗಾತೀರದ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ನಿನ್ನೆ ಶಿವಮೊಗ್ಗ, ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ 6 ಕಡೆ ದಾಳಿ ಮಾಡಿದೆ. ಈ ವೇಳೆ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್‌ನಲ್ಲಿ ಐಸಿಸ್ ಒಳಸಂಚು ಇರುವದು ಪತ್ತೆಯಾಗಿದೆ.
ಈ ದಾಳಿ ವೇಳೆ ಎನ್‌ಐಎ ಐಸಿಸ್ನ ಸಕ್ರಿಯ ಸದಸ್ಯರಾಗಿರುವ ಶಿವಮೊಗ್ಗದ ಮಂಜುನಾಥ ಬಡಾವಣೆಯ ಉಜೇರ್ ಫರ್ಹಾನ್ ಬೇಗ್, ಉಡುಪಿಯ ರೇಶಾನ್ ತಾಜೂದ್ದೀನ್ ಶೇಖ್ ಮೆನಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದಾರೆ. ಶಂಕಿತ ಉಗ್ರ ಮಾಜ್ ವಿಚಾರಣೆ ವೇಳೆ ಇಬ್ಬರ ಹೆಸರು ಬಾಯಿಬಿಟ್ಟಿದ್ದನು. ಈ ಹಿನ್ನೆಲೆ ಆರೋಪಿ ಮಾಜ್‌ಗೆ ಸಹಪಾಠಿಯಾಗಿದ್ದ ರೇಶಾನ್ ತಾಜೂದ್ದೀನ್ನನ್ನು ಬಂಧಿಸಲಾಗಿದೆ.