ನವದೆಹಲಿ: 2016 ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರವು 1,000 ಮತ್ತು 500 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ 58 ಅರ್ಜಿಗಳನ್ನೂ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠ ವಜಾಗೊಳಿಸಿದೆ. ಜೊತೆಗೆ ನೋಟ್ ಬ್ಯಾನ್ ಶಾಸನಬದ್ಧವಾಗಿದೆ ಎಂಬ ಮಹತ್ವದ ತೀರ್ಪುನ್ನು ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಸಾಂವಿಧಾನಿಕ ಪೀಠವು ಇಂದು ಪ್ರಕಟಿಸಿದೆ.
ಅಲ್ಲದೇ ನೋಟ್ ಬ್ಯಾನ್ ನಿರ್ಧಾರವನ್ನು ಹಿಂಪಡೆಯಲು ಈಗ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನೋಟು ರದ್ದತಿ ನಿರ್ಧಾರದಲ್ಲಿ ಯಾವುದೇ ದೋಷವಿಲ್ಲ. ಕೇಂದ್ರ ಸರ್ಕಾರದ ನಿರ್ಧಾರದಲ್ಲಿ ಯಾವುದೇ ತಪ್ಪು ಇಲ್ಲ. ಅದು ಶಾಸನಬದ್ಧವಾಗಿಯೇ ಇದೆ. ಇದನ್ನು ನ್ಯಾಯಾಲಯವು ಪರಿಶೀಲನೆ ಮಾಡಿ ತಿಳಿದುಕೊಂಡಿದೆ ಎಂದು ಕೋರ್ಟ್ ಹೇಳಿದೆ.