ತಾಯಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಇಂದು ಮುಂಜಾನೆ ಅಹಮದಾಬಾದ್​​ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಕ್ಷಣ ದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ ತಮ್ಮ ತಾಯಿಯ ಅಂತಿಮ ದರ್ಶನ ಪಡೆದಿದ್ದಾರೆ.

ಪ್ರಧಾನಿ ಮೋದಿ ತಾವೇ ಮುಂದೆ ನಿಂತು ತಾಯಿಯ ಅಂತಿಮಯಾತ್ರೆಗೆ ಹೆಗಲು ಕೊಟ್ಟಿದ್ದರು. ಬಳಿಕ ಗಾಂಧಿನಗರದ ಚಿತಾಗಾರದಲ್ಲಿ 100 ವರ್ಷದ ಹೀರಾಬೆನ್ ಮೋದಿ ಅಂತಿಮ ಕ್ರಿಯೆಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.