ಥಾಯ್ಲೆಂಡ್: ದೇಶದ ಗಡಿಯಲ್ಲಿರುವ ಕಾಂಬೋಡಿಯನ್ ಹೋಟೆಲ್ ಕ್ಯಾಸಿನೊದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, 10 ಜನರು ಸಾವಿಗೀಡಾಗಿದ್ದಾರೆ. ಪೊಯಿಪೆಟ್‌ನಲ್ಲಿರುವ ಗ್ರ್ಯಾಂಡ್ ಡೈಮಂಡ್ ಸಿಟಿ ಕ್ಯಾಸಿನೊ-ಹೋಟೆಲ್‌ನಲ್ಲಿ ಬುಧವಾರ ತಡರಾತ್ರಿ ಸುಮಾರು ಸ್ಥಳೀಯ ಕಾಲಮಾನ 11.30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ಕಾಂಬೋಡಿಯನ್ ಪೊಲೀಸರು ತಿಳಿಸಿದ್ದಾರೆ.
ಈ ಅವಘಡದಲ್ಲಿ 30 ಜನರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಸಿನೊದಲ್ಲಿ ವಿದೇಶಿ ಪ್ರಜೆಗಳು, ಕೆಲಸಗಾರರು ಸೇರಿ ಸುಮಾರು 400 ವ್ಯಕ್ತಿಗಳು ಇದ್ದರು ಎನ್ನಲಾಗಿದೆ.
ಗಾಯಗೊಂಡವರನ್ನು ಥೈಲ್ಯಾಂಡ್‌ನ ಸಾ ಕೆಯೊ ಪ್ರಾಂತ್ಯದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳು ಥಾಯ್ಲೆಂಡ್ ಕಡೆಯಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸುವ ಮೂಲಕ ಬೆಂಕಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಥಾಯ್ ರಕ್ಷಣಾ ಕಾರ್ಯಾಚರಣೆಯ ಗುಂಪಿನ ರುವಾಮ್ಕಟಾನ್ಯು ಫೌಂಡೇಶನ್‌ನ ಸ್ವಯಂಸೇವಕರೊಬ್ಬರು, ಬೆಂಕಿಯು ಮೊದಲ ಮಹಡಿಯಲ್ಲಿ ಹೊತ್ತಿಕೊಂಡಿತು. ಬಳಿಕ ಕಟ್ಟಡದ ಉದ್ದಕ್ಕೂ ಹರಡಿತು. ಬಹುಮಹಡಿ ಕಟ್ಟಡದ ಮೂಲಕ ಮೇಲಕ್ಕೂ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿಸಿದ್ದಾರೆ.