ಡಾ. ಸುಧಾಕರ್​ ಮತ್ತು ಆರ್​.ಅಶೋಕ್​ ನೇತೃತ್ವಲ್ಲಿ ಮಹತ್ವದ ಸಭೆ: ನ್ಯೂ ಇಯರ್​ ಸೆಲೆಬ್ರೆಷನ್​ಗೆ ರಾತ್ರಿ 1ಗಂಟೆ ಡೆಡ್​ಲೈನ್.!

ಬೆಳಗಾವಿ: ಚೀನಾದ ಕೋವಿಡ್ ರೂಪಾಂತರಿ ಬಿಎಫ್ ​7 ಭೀತಿ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಸಚಿವ ಡಾ. ಸುಧಾಕರ್​ ಮತ್ತು ಕಂದಾಯ ಸಚಿವ ಆರ್​.ಅಶೋಕ್​ ನೇತೃತ್ವಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್​, ಸರ್ಕಾರ ಯಾವುದೇ ನಿರ್ಬಂಧವನ್ನು ಹೇರಿಲ್ಲ. ಬದಲಿಗೆ ಎಲ್ಲರೂ ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕು ಎಂದು ಮನವಿ ಮಾಡಿಕೊಂಡರು. ಇನ್ನು ಹೊಸ ವರ್ಷದ ಸಂಭ್ರಮಾಚರಣೆಗೆ ಮತ್ತು ಶಾಲಾ ಕಾಲೇಜುಗಳಿಗೆ ಸುತ್ತೋಲೆಯನ್ನ ಹೊರಡಿಸಲು ನಿರ್ಧರಿಸಲಾಗಿದೆ. 3 ನೇ ಡೋಸ್​ ಲಸಿಕೆಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ಹೇಳಿದರು

ಈ ಸಭೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ವಿಪತ್ತು ನಿರ್ವಹಣಾ ದಳದ ಅಧಿಕಾರಿಗಳು ಭಾಗಿಯಾಗಿದ್ದರು.

ಹೊಸ ವರ್ಷದ ಸಂಭ್ರಕ್ಕೆ ಏನು ಗೈಡ್​ಲೈನ್ಸ್​..? 

  • ರಾಜ್ಯದ್ಯಾಂತ ನ್ಯೂ ಇಯರ್​ ಸೆಲೆಬ್ರೆಷನ್​ಗೆ ರಾತ್ರಿ 1ಗಂಟೆ ಡೆಡ್​ಲೈನ್​​
  • ನ್ಯೂ ಇಯರ್​ ಸೆಲೆಬ್ರೆಷನ್​ ವೇಳೆ ಮಾಸ್ಕ್​, ಸಾಮಾಜಿಕ ಅಂತರ ಕಡ್ಡಾಯ
  • ಮಧ್ಯರಾತ್ರಿ 1 ಗಂಟೆ ವೇಳೆಗೆ ಎಲ್ಲ ಸೆಲೆಬ್ರೆಷನ್​ ಮುಗಿಸಬೇಕು
  • ರಾತ್ರಿ 1 ಗಂಟೆ ಬಳಿಕ ಪಬ್, ರೆಸ್ಟೋರೆಂಟ್​ಗಳನ್ನ ಕ್ಲೋಸ್​ ಮಾಡಬೇಕು
  • ಪಬ್, ರೆಸ್ಟೋರೆಂಟ್​ನಲ್ಲಿರುವ ಸಿಬ್ಬಂದಿಗೂ ಎರಡು ಡೋಸ್ ಲಸಿಕೆ ಕಡ್ಡಾಯ
  • ಪಬ್, ರೆಸ್ಟೋರೆಂಟ್​ಗೆ ಬರುವವರಿಗೂ 2 ಡೋಸ್​ ಆಗಿರಬೇಕು
  • ಒಳಂಗಾಣ ಕಾರ್ಯಕ್ರಮಕ್ಕೆ ಟೇಬಲ್​ ಇರುವಷ್ಟೇ ಜನ ಸೇರಬೇಕು
  • ಪಬ್, ಬಾರ್, ಕ್ಲಬ್, ರೆಸಾರ್ಟ್, ರೆಸ್ಟೊರೆಂಟ್​ಗಳಲ್ಲಿ ಮಾಸ್ಕ್​ ಹಾಕಲೇಬೇಕು
  • ಸಂಭ್ರಮಾಚರಣೆ ಸ್ಥಳಗಳಲ್ಲಿ ಮಾರ್ಷಲ್ಸ್​, ಪೊಲೀಸ್​ ನಿಯೋಜನೆ
  • ಆಯಾ ನಗರ, ಪಟ್ಟಣಗಳಲ್ಲೇ ಹೊಸ ವರ್ಷಾಚರಣೆಗೆ ಒತ್ತು
  • ಹೊಸವರ್ಷ ಆಚರಣೆಗೆ ಬೆಂಗಳೂರಿಗೆ ಬರುವವರ ಮೇಲೆ ನಿಗಾ ವಹಿಸಲಾಗುವುದು
  • ಪಾರ್ಟಿಯಲ್ಲಿ ಮಕ್ಕಳು, ಗರ್ಭಿಣಿಯರು ಭಾಗಿಯಾಗುವಂತಿಲ್ಲ