ನವದೆಹಲಿ: ಕೇಂದ್ರ ಸರ್ಕಾರವು ಮೂಗಿನ ಮೂಲಕ ಹಾಕುವ ಕೊರೊನಾ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. ಭಾರತ ಸರ್ಕಾರ ಶುಕ್ರವಾರ ಕೋವಿಡ್ -19 ನ ನಾಸಲ್ ಲಸಿಕೆ ಬಳಕೆಗೆ ಅನುಮೋದನೆ ನೀಡಿ ಆದೇಶಿಸಿದೆ. ಇದು ಭಿನ್ನರೂಪದ ಬೂಸ್ಟರ್ ಆಗಿ ಬಳಸಲ್ಪಡುತ್ತದೆ.
ಕೊರೊನಾ ವೈರಸ್‌ಗಾಗಿ ಮೂಗಿನ ಲಸಿಕೆಯನ್ನು ಇಂದಿನಿಂದ ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಮತ್ತು ಅದು ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ. ಭಾರತ್ ಬಯೋಟೆಕ್ ಮೂಗಿನ ಲಸಿಕೆಯನ್ನು ಅನುಮೋದಿಸಲಾಗಿದೆ ಮತ್ತು ಕೋವಿನ್ ಅಪ್ಲಿಕೇಶನ್‌ನಲ್ಲಿ ಸೇರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಖಾಸಗಿ ಕೇಂದ್ರಗಳಲ್ಲಿ ಲಭ್ಯವಿದ್ದು, ಶುಕ್ರವಾರ ಸಂಜೆ CoWIN ನಲ್ಲಿ ಪರಿಚಯಿಸಲಿದೆ. ಭಾರತ್ ಬಯೋಟೆಕ್‌ನ ಮೂಗಿನ ಕೋವಿಡ್ ಲಸಿಕೆಯನ್ನು ಶೀಘ್ರದಲ್ಲೇ ದೇಶದಲ್ಲಿ ಬೂಸ್ಟರ್ ಡೋಸ್ ಆಗಿ ಪರಿಚಯಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.