ರಾಜಸ್ಥಾನ: ಪಾಕಿಸ್ತಾನದ ಕಡೆಯಿಂದ ಭಾರತದ ಭೂಪ್ರದೇಶವನ್ನು ದಾಟಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕರಣ್‌ಪುರದ ಹತ್ತಿರ ಅಂತರರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಗುಂಡಿಕ್ಕಿ ಹತ್ಯೆ ಗೈಯ್ದಿದ್ದಾರೆ. ಈ ಘಟನೆಯು ಶ್ರೀಗಂಗಾನಗರದ ಹರ್ಮುಖ್ ಚೆಕ್ ಪೋಸ್ಟ್ ಬಳಿಯ 14 ಎಸ್. ಗ್ರಾಮದಲ್ಲಿ ನಡೆದಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿ ಖಚಿತಪಡಿಸಿದ್ದಾರೆ.
ಸೋಮವಾರ ಹರ್ಮುಖ್ ಚೆಕ್ ಪೋಸ್ಟ್ ಬಳಿಯ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಬರುತ್ತಿದ್ದ ಉಗ್ರರನ್ನು ಎಚ್ಚೆತ್ತ ಬಿಎಸ್‌ಎಫ್ ಪಡೆಗಳು ತಟಸ್ಥಗೊಳಿಸಿದ್ದವು. ಒಳನುಗ್ಗುವವರು ಭಾರತದ ಕಡೆಗೆ ದಾಟಿ ಬೇಲಿ ಕಡೆಗೆ ಚಲಿಸಲು ಪ್ರಾರಂಭಿಸಿದರು. ಶೋಧ ಕಾರ್ಯಾಚರಣೆಯ ವೇಳೆ ಮೃತದೇಹವನ್ನು ವಶಪಡಿಸಿಕೊಳ್ಳಲಾಯಿತು.
ಗಸ್ತು ಕರ್ತವ್ಯದಲ್ಲಿದ್ದ BSF ಪಡೆಗಳು ಒಳನುಗ್ಗುವವರಿಗೆ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದರೂ ಯಾವುದೇ ಗಮನ ಕೊಡದೆ ಭಾರತದ ಗಡಿಯ ಕಡೆಗೆ ಚಲಿಸುತ್ತಲೇ ಇದ್ದರು. ಬಳಿಕ ಸೈನಿಕರು ಗುಂಡು ಹಾರಿಸಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದರು. ನಂತರ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.