‘ಡಬಲ್ ಇಂಜಿನ್’ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ – ಜೆ.ಪಿ ನಡ್ಡಾ ವಿಶ್ವಾಸ

ಗುಜರಾತ್: ರಾಜ್ಯದಲ್ಲಿ ಬಿಜೆಪಿ ದೊಡ್ಡ ಬಹುಮತದೊಂದಿಗೆ ಪುನಃ ಸರ್ಕಾರ ರಚಿಸಲಿದೆ, ಡಬಲ್‌ ಇಂಜಿನ್‌ ಸರ್ಕಾರ ಪುನಃ ಅಧಿಕಾರ ಸ್ಥಾಪಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುಜರಾತ್ ಚುನಾವಣಾ ದಿನಾಂಕ ಘೋಷಣೆಯದ ಬೆನ್ನಲ್ಲೇ ಜೆಪಿ ನಡ್ಡಾ ಈ ಹೇಳಿಕೆ ನೀಡಿದ್ದಾರೆ. ಈಗಾಗಲೇ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಾಕಷ್ಟು ತಯಾರಿ ಮಾಡಿಕೊಂಡಿದೆ.

ಗುಜರಾತಿನಲ್ಲಿ ಡಿಸೆಂಬರ್ 1ರಂದು ಪ್ರಥಮ, 5ರಂದು 2ನೇ ಹಂತದ ಮತದಾನ ನಡೆಯಲಿದ್ದು ಡಿಸೆಂಬರ್​ 8ರಂದು ಫಲಿತಾಂಶ ಪ್ರಕಟವಾಗಲಿದೆ.