ಬೆಂಗಳೂರು: 100 ಹಳೆಯ ಬಸ್ಸುಗಳನ್ನು BMTC ಸೇಲ್ ಮಾಡಲು ನಿರ್ಧರಿಸಿದ್ದು ತಲಾ ಒಂದು ಲಕ್ಷ ರೂಪಾಯಿಗಳಂತೆ ಬಸ್ ಮಾರಾಟ ಮಾಡಲು ಮುಂದಾಗಿದೆ. 8.5 ಲಕ್ಷದಿಂದ 9.5 ಲಕ್ಷ ಕಿಲೋಮೀಟರ್ ಕ್ರಮಿಸಿರುವ ಹಳೆ ಬಸ್ ಗಳನ್ನು BMTC ಮಾರಾಟ ಮಾಡಲಿದೆ.
ಇನ್ನು ವಾಯುವ್ಯ ಸಾರಿಗೆ ನಿಗಮ ಹಳೆ ಬಸ್ ಗಳನ್ನು ಖರೀದಿಗೆ ಮುಂದಾಗಿದ್ದು ಈಗಾಗಲೇ BMTC 30 ಬಸ್ಸುಗಳನ್ನು ವಾಯುವ್ಯ ಸಾರಿಗೆ ನಿಗಮಕ್ಕೆ ಹಸ್ತಾಂತರ ಮಾಡಲಾಗಿದೆ ಎನ್ನಲಾಗುತ್ತಿದೆ. ಬಸ್ ಗಳು ಪ್ರಯಾಣಿಕರನ್ನು ಕರೆದೊಯ್ಯಲು ಯೋಗ್ಯವಾಗಿವೆಯಾ.? ಎಂಬ ಪ್ರಶ್ನೆ ಎದುರಾಗಿದ್ದು ಬಸ್ಸುಗಳನ್ನು ಪಡೆದುಕೊಳ್ಳುವ ಮುನ್ನ ವಾಯುವ್ಯ ಸಾರಿಗೆ ನಿಗಮದ ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿ ಪ್ರಮಾಣ ಪತ್ರ ಪಡೆಯಲಿದ್ದಾರೆ.