ವಾಣಿಜ್ಯ LPG ಸಿಲಿಂಡರ್ ಬೆಲೆ ಕಡಿತ: ಯಾವ ನಗರದಲ್ಲಿ ಎಷ್ಟಿದೆ.? ಇಲ್ಲಿದೆ ವಿವರ

ನವದೆಹಲಿ: ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 115 ರೂ. ಇಳಿಕೆಯಾಗಿದೆ. ದೇಶಾದ್ಯಂತ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತ ಮಾಡಲಾಗಿದ್ದು, ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಜುಲೈ 6 ರಂದು ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಾಗಿತ್ತು.

ದೆಹಲಿಯಲ್ಲಿ 19 ಕೆಜಿ ಇಂಡೇನ್ ವಾಣಿಜ್ಯ ಸಿಲಿಂಡರ್ ಬೆಲೆ ನವೆಂಬರ್ 1 ರಿಂದ 115.5 ರೂ. ಇಳಿಕೆಯಾಗಿದೆ. ಅದೇ ಸಮಯದಲ್ಲಿ, ಕೋಲ್ಕತ್ತದಲ್ಲಿ 113ರೂ, ಮುಂಬೈನಲ್ಲಿ 115.5 ರೂ. ಮತ್ತು ಚೆನ್ನೈನಲ್ಲಿ116.5ರೂ. ಕಡಿತಗೊಳಿಸಲಾಗಿದೆ. ಇದಕ್ಕೂ ಮುನ್ನ ಅಕ್ಟೋಬರ್ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆ 25 ರೂ. ಕಡಿತ ಮಾಡಲಾಗಿತ್ತು. ಆದರೆ, 14.2 ಕೆಜಿಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.