60 ದಿನಗಳಲ್ಲಿ ರಾಜ್ಯಾದ್ಯಂತ 50 ಲಕ್ಷಕ್ಕೂ ಅಧಿಕ ‘ಆಯುಷ್ಮಾನ್ ಕಾರ್ಡ್’ ವಿತರಣೆ: ಶೀಘ್ರದಲ್ಲಿ 1 ಕೋಟಿ ತಲುಪುವ ಗುರಿ

ಬೆಂಗಳೂರು: ಕಳೆದ 2 ತಿಂಗಳಲ್ಲಿ ರಾಜ್ಯದಾದ್ಯಂತ 50 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ರಾಜ್ಯದ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಸಮರೋಪಾದಿಯಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ ಗಳನ್ನು ವಿತರಿಸಲಾಗಿದೆ. ನನ್ನ ಕರೆಗೆ ಓಗೊಟ್ಟು ಕಳೆದ 60 ದಿನಗಳಲ್ಲಿ ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಕಾರ್ಡ್ ವಿತರಿಸಿರುವ ಗ್ರಾಮ ಒನ್ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಶೇ.100% ರಷ್ಟು ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಮುಂದಿನ 15 ದಿನಗಳಲ್ಲಿ ಒಂದು ಕೋಟಿ ಕಾರ್ಡ್ ವಿತರಣೆ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದಿದ್ದಾರೆ.