ಅಭ್ಯಾಸ ಪಂದ್ಯದಲ್ಲಿ ಆಸಿಸ್ ವಿರುದ್ಧ ಟೀಂ​ ಇಂಡಿಯಾಗೆ ರೋಚಕ ಗೆಲುವು.!

ಬ್ರಿಸ್ಬೇನ್‌: ಟಿ20 ವಿಶ್ವಕಪ್ ಪೂರ್ವ ತಯಾರಿಯ ಅಭ್ಯಾಸ ಪಂದ್ಯದಲ್ಲಿ ಆಸಿಸ್ ವಿರುದ್ಧ ಟೀಂ​ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ. ಗಬಾ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾಗೆ ಕೆಎಲ್​ ರಾಹುಲ್​, ಸೂರ್ಯ ಕುಮಾರ್​​ ಸಿಡಿಸಿದ ಅರ್ಧಶತಕ ಬಲ ನೀಡಿತು.

ಟೀಮ್​ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್​​ ನಷ್ಟಕ್ಕೆ 187 ರನ್​ ಗಳಿಸಿತು. ಪ್ರಾರಂಭದಲ್ಲಿ ಆಸ್ಟ್ರೇಲಿಯಾ ಅಬ್ಬರಿಸಿದರೂ ಮಿಡಲ್​ ಓವರ್​ಗಳಲ್ಲಿ ಟೀಮ್​ ಇಂಡಿಯಾ ಬೌಲರ್ಸ್ ಪಾರಮ್ಯ ಸಾಧಿಸಿ​​, ಕಾಂಗರೂಗಳಿಗೆ ಸೋಲುಣಿಸಿದರು. ಇನ್ನು, ಅಂತಿಮ ಓವರ್​​ನಲ್ಲಿ ಅದ್ಭುತ​ ಬೌಲಿಂಗ್​ ಮಾಡಿದ ಮೊಹಮ್ಮದ್​ ಶಮಿ ಟೀಮ್​ ಇಂಡಿಯಾ ಗೆಲುವಿಗೆ ಕಾರಣೀಕರ್ತರಾದರು.