ಬೆಂಗಳೂರು: ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಿಬ್ಬಂದಿ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ಸಲ್ಲಿಸಿದ್ದಾರೆ. 25 ಕ್ಕೂ ಹೆಚ್ಚು ಎಫ್ಡಿಎ, ಎಸ್ಡಿಎಗಳಿಂದ ಎಡಿಜಿಪಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್ 3 ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸದ್ಯ ವೈರಲ್ ಆಗಿದೆ.
ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನು ಬಾಹಿರವಾಗಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ. ಉದ್ದೇಶ ಪೂರ್ವಕವಾಗಿ ಸಿಬ್ಬಂದಿಗಳನ್ನ ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಶಾ ಜೇಮ್ಸ್ ಸಂಜೆ 6 ರ ನಂತರ ಕೆಲಸ ಶುರುಮಾಡಿ ರಾತ್ರಿ 3ಕ್ಕೆ ಮುಗಿಸ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗ್ತಿಲ್ಲ. ನಿಶಾ ಜೇಮ್ಸ್ ಕಿರುಕುಳದಿಂದಾಗಿ ನಮಗೆ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ ಎಂದು ಸಿಬ್ಬಂದಿ ನೀಡಿದ್ದ ದೂರಿನ ಪ್ರತಿ ಈಗ ವೈರಲ್ ಆಗಿದೆ.