ಪಿಎಸ್​ಐ ನೇಮಕಾತಿ ಹಗರಣ: ಸಿಐಡಿ ಇಂದ ಬಂಧಿತ ಆರೋಪಿಗಳ ಮೇಲೆ ಹೊಸ ಅಸ್ತ್ರದ ಪ್ರಯೋಗ.!

ಬೆಂಗಳೂರು: 2021 ರ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಬಂಧಿತರಾದವರ ಮೇಲೆ ಸಿಐಡಿ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಮಾಡಿ ತನಿಖೆ ಕೈಗೊಂಡಿದ್ದಾರೆ.

ಪಿಎಸ್​ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ದೃಡಪಟ್ಟಿದೆ. ಈ ಪ್ರಕರಣದ ತನಿಖೆಯ ವೇಳೆ ಸುಮಾರು 1.5 ಕೋಟಿಗೂ ಹೆಚ್ಚಿನ ಹಣ ಪತ್ತೆಯಾಗಿದೆ. ಹಣದ ಮೂಲ ಪರಿಶೀಲನೆ ಮಾಡಿದಾಗ ಅದು ಲಂಚ ಪಡೆದಿದ್ದು ಎಂದು ದೃಢವಾಗಿದೆ. ಇದರ ಹಿನ್ನೆಲೆಯಲ್ಲಿ ಲಂಚ ನೀಡಿದವರು ಹಾಗೂ ಲಂಚ ಪಡೆದವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. 

ಇದುವರೆಗೆ ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಕೇಸ್ ಇತ್ತು. ಪಿ.ಸಿ. ಆಕ್ಟ್ ಹಾಕಿರುವ ಹಿನ್ನಲೆ ಇನ್ನು ಮುಂದೆ ಸಿಸಿಎಚ್ 23 ನೇ ನ್ಯಾಯಾಲಯದಲ್ಲಿ ಕೇಸ್ ನಡೆಯಲಿದೆ. ಹಣ ವರ್ಗಾವಣೆ ಹಾಗೂ ಬೇನಾಮಿ ಆಸ್ತಿ ಪತ್ತೆಯಾದ ಹಿನ್ನೆಲೆ ಇ.ಡಿ ಸಹ ಈ ಹಗರಣದ ಕೇಸ್​ನಲ್ಲಿ ಎಂಟ್ರಿಯಾಗಲಿದೆ. ಅಲ್ಲದೆ ಕೆಲ ಆರೋಪಿಗಳನ್ನು ಈಗಾಗಲೇ ಇಡಿ ವಿಚಾರಣೆ ನಡೆಸಿದೆ.