ಗೆಲುವಿನ ಓಟ ಮುಂದುವರೆಸಿದ ಬೆಂಗಳೂರು ಬುಲ್ಸ್.! ಅಂಕಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಏರಿಕೆ.!

ಬೆಂಗಳೂರು: ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಪುಣೇರಿ ಪಲ್ಟಾನ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 41-39 ಅಂಕಗಳಿಂದ ಗೆಲುವು ಸಾಧಿಸಿದೆ.

ದ್ವಿತಿಯಾರ್ಧದಲ್ಲಿ ಪುಣೇರಿ ದಿಟ್ಟ ಹೋರಾಟ ನೀಡಿದರೂ ಅಂತಿಮ ಹಂತದಲ್ಲಿ ಬುಲ್ಸ್ 2 ಅಂಕಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿದೆ. ಬುಲ್ಸ್ ತಂಡಕ್ಕೆ ಮೋಹಿತ್ ಗೋಯಾತ್ ಹಾಗೂ ಅಸ್ಲಾಮ್ ಇಮಾನ್ದಾರ್ ನ ರೈಡರ್ ಪಾಯಿಂಟ್ಸ್ ನೆರವಾಯಿತು. 2 ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಮಣಿಸಿದ ಬೆಂಗಳೂರು ಬುಲ್ಸ್ ಸತತ ಎರಡು ಪಂದ್ಯ ಗೆಲ್ಲುವ ಮೂಲಕ 10 ಅಂಕಗಳನ್ನು ಸಂಪಾದಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.