ಬೆಂಗಳೂರು: ನಟಿ ಶ್ರೀಲೀಲಾ ತಾಯಿ ಸ್ವರ್ಣ ಲತಾ ವಿರುದ್ದ ಮಾಜಿ ಪತಿ ಸುಧಾಕರ್ ರಾವ್ ಸುರಪನೇನಿ ದೂರು ನೀಡಿದ್ಧಾರೆ. ಇದೀಗ ನಟಿ ತಾಯಿ ಸ್ವರ್ಣಲತಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ಅಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಧಾಕರ್ ರಾವ್ ಹಾಗೂ ಸ್ವರ್ಣಲತಾ ಇಪ್ಪತ್ತು ವರ್ಷಗಳ ಹಿಂದೆ ವಿಚ್ಚೇದನ ಪಡೆದುಕೊಂಡಿದ್ದರು. ಆದರೂ ಸುಧಾಕರ್ ರಾವ್ ಮನೆಗೆ ಸ್ವರ್ಣಲತಾ ಅತಿಕ್ರಮ ಪ್ರವೇಶ ಮಾಡಿರುವ ಆರೋಪದಡಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಈ ಹಿಂದೆ ಅನೇಕಲ್ ಠಾಣೆಯಲ್ಲಿ ಸ್ವರ್ಣಲತಾ ವಿರುದ್ದ FIR ದಾಖಲಾಗಿತ್ತು. ಅಲಯನ್ಸ್ ಯೂನಿವರ್ಸಿಟಿ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕಾಲೇಜಿಗೆ ನುಗ್ಗಿ ದಾಂಧಲೆ ಮಾಡಿದ್ದ ಆರೋಪ ಇತ್ತು. ಇದೀಗ ಮಾಜಿ ಪತಿಯ ಮನೆಗೆ ನುಗ್ಗಿರುವ ಆರೋಪ ಮಾಡಿದ್ದಾರೆ. ಈ ವೇಳೆ ಸ್ವರ್ಣಲತಾ ನಿರೀಕ್ಷಣಾ ಜಾಮೀನು ಪಡೆದಿದ್ದರು.