ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಹೊರಗುಳಿದಿದ್ದಾರೆ. ಬುಮ್ರಾ ಬೆನ್ನಿನ ಗಾಯವು ತುಂಬಾ ಗಂಭೀರವಾಗಿದ್ದರಿಂದ, ಚೇತರಿಸಿಕೊಳ್ಳಲು 4-6 ತಿಂಗಳುಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರವಿರಲಿದ್ದಾರೆ ಎನ್ನಲಾಗಿದೆ.
ಬೆನ್ನು ನೋವಿನಿಂದಾಗಿ ಬುಮ್ರಾ ಟೀಮ್ ಇಂಡಿಯಾದೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗುವುದಿಲ್ಲ. ಜಸ್ಪ್ರೀತ್ ಬುಮ್ರಾಗೆ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಜಸ್ಪ್ರೀತ್ ಬುಮ್ರಾ ಕೆಲ ತಿಂಗಳುಗಳ ಕಾಲ ಕ್ರಿಕೆಟ್ ಮೈದಾನದಿಂದ ದೂರ ಉಳಿಯುತ್ತಾರೆ ಎಂಬುದು ಸ್ಪಷ್ಟವಾಗಿದೆ.