ಕೇರಳ: ದೇಶದ 13 ರಾಜ್ಯಗಳಲ್ಲಿ ಎನ್‌ಐಎ ಮತ್ತು ಇಡಿ ದಾಳಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಎರ್ನಾಕುಲಂನಲ್ಲಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಹುಲ್ ಗಾಂಧಿ, ಎಲ್ಲ ರೀತಿಯ ಕೋಮುವಾದವು ಎಲ್ಲಿಂದ ಬಂದರೂ ಅದನ್ನು ಎದುರಿಸಬೇಕು. ಅದರ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು. ಕೋಮುವಾದ, ದ್ವೇಷ ಮತ್ತು ಹಿಂಸಾಚಾರದ ರಾಜಕೀಯವನ್ನು ನಿಯಂತ್ರಿಸಲು ಪಿಎಫ್‌ಐ ಮೇಲೆ ದೇಶವ್ಯಾಪಿ ನಡೆದಿರುವ ದಾಳಿಗಳು ಅಗತ್ಯ ಇದೆ ಎಂದು ಹೇಳುವ ಮೂಲಕ ದಾಳಿಗೆ ಬೆಂಬಲ ನೀಡಿದ್ದಾರೆ.