ಪಕ್ಷಕ್ಕೆ ಗುಡ್ ಬೈ ಹೇಳ್ತಾರಾ ಮತ್ತೊಬ್ಬ ಕಾಂಗ್ರೆಸ್ ಮುಖಂಡ.? ಕಾಂಗ್ರೇಸ್ ಗೆ ಶಾಕ್ ಮೇಲೆ ಶಾಕ್.!

ನವದೆಹಲಿ: ಕಾಂಗ್ರೆಸ್ ಪಕ್ಷ ತೊರೆದು ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇದೀಗ ಈ ಸಾಲಿಗೆ ಸೇರ್ಪಡೆಗೊಂಡವರು ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಕೇಂದ್ರ ಸಚಿವ ಕರಣ್ ಸಿಂಗ್. ಹೌದು ಈ ಬಗ್ಗೆ ಮಾತನಾಡಿದ ಕರಣ್ ಸಿಂಗ್ ಕಾಂಗ್ರೆಸ್ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಕ್ಷದ ಮುಖಂಡರು ಕಡೆಗಣಿಸಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೇಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಪಕ್ಷ ತೊರೆದಿರುವ ಬೆನ್ನಲ್ಲೇ ಕರಣ್ ಸಿಂಗ್ ಈ ರೀತಿ ಮಾತನಾಡಿರುವುದು ಪಕ್ಷಕ್ಕೆ ಶಾಕ್ ಆಗಿದೆ.

‘ನಾನು 1967 ರಲ್ಲಿ ಕಾಂಗ್ರೆಸ್ ಸೇರಿದ್ದೆ. ಆದರೆ ಕಳೆದ 8-10 ವರ್ಷಗಳಿಂದ ನಾನು ಸಂಸತ್ತಿನಲ್ಲಿ ಇಲ್ಲ. ನನ್ನನ್ನು ಕಾರ‍್ಯಕಾರಿ ಸಮಿತಿಯಿಂದ ಕೈಬಿಡಲಾಯಿತು. ನಾನು ಕಾಂಗ್ರೆಸ್‌ನಲ್ಲಿದ್ದೇನೆ ನಿಜ. ಆದರೆ ಯಾವುದೇ ಸಂಪರ್ಕವಿಲ್ಲ. ನನ್ನನ್ನು ಯಾರೂ ಏನನ್ನೂ ಕೇಳುವುದಿಲ್ಲ. ನಾನು ನನ್ನ ಸ್ವಂತ ಕೆಲಸವನ್ನು ಮಾಡುತ್ತೇನೆ. ಪಕ್ಷದೊಂದಿಗಿನ ನನ್ನ ಸಂಬಂಧ ಈಗ ಬಹುತೇಕ ಶೂನ್ಯ

– ಕರಣ್ ಸಿಂಗ್, ಕಾಂಗ್ರೆಸ್ ನಾಯಕ