ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಟೆನಿಸ್‌ ದಂತಕತೆ ರೋಜರ್‌ ಫೆಡರರ್‌.!

ಟೆನಿಸ್ ಲೋಕದ ಸರ್ವಶ್ರೇಷ್ಠ ಆಟಗಾರ ರೋಜರ್ ಫೆಡರರ್‌ ತಮ್ಮ ಟೆನಿಸ್‌ ವೃತ್ತಿ ಜೀವನಕ್ಕೆ ಗುರುವಾರ ವಿದಾಯ ಹೇಳಿದ್ದಾರೆ. ಇದರಿಂದ ಟೆನಿಸ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಮುಂದಿನ ವಾರ ಆರಂಭವಾಗುವ 2022ರ ಲೆವರ್‌ ಕಪ್‌ ರೋಜರ್‌ ಫೆಡೆರರ್‌ ಪಾಲಿಗೆ ವೃತ್ತಿ ಜೀವನದ ಕೊನೆಯ ಎಟಿಪಿ ಟೂರ್ನಿಯಾಗಲಿದೆ. ಈ ಮೂಲಕ 24 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಟೆನಿಸ್ ಬದುಕಿಗೆ ಅಂತ್ಯ ಹೇಳಲು ನಿರ್ಧರಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಹೇಳಿಕೆಯಲ್ಲಿ ರೋಜರ್‌ ಫೆಡರರ್‌ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ 24 ವರ್ಷಗಳ ವೃತ್ತಿ ಜೀವನದಲ್ಲಿ ಅವರು 29 ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ. 2003ರ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಗ್ರ್ಯಾನ್‌ಸ್ಲ್ಯಾಮ್ ಬೇಟೆ ಆರಂಭಿಸಿದ ಫೆಡರರ್ ನಂತರ ಟೆನಿಸ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ 6 ಆಸ್ಟ್ರೇಲಿಯನ್ ಓಪನ್, 8 ವಿಂಬಲ್ಡನ್, 5 ಯುಎಸ್ ಓಪನ್ ಪ್ರಶಸ್ತಿಗಳು ಮತ್ತು ಒಂದು ಫ್ರೆಂಚ್ ಓಪನ್ ಗೆದ್ದುಕೊಂಡಿದ್ದಾರೆ