ಮುಂಡಗೋಡ: ಕಾಡಿನಿಂದ ಆಹಾರ ಅರಸುತ್ತಾ ನಾಡಿಗೆ ಬಂದಿದ್ದ ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸಿ ಜಿಂಕೆ ಗಾಯಗೊಂಡಿರುವ ಘಟನೆ ಪಾಳಾ ಹೊರವಲಯದಲ್ಲಿ ಮಂಗಳವಾರ ಜರುಗಿದೆ. ಬಳಿಕ ಜಿಂಕೆಯನ್ನು ರಕ್ಷಿಸಿ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡಲಾಗಿದೆ.
ಪಾಳಾ ಗ್ರಾಮದ ಹೊರವಲಯದಲ್ಲಿರುವ ಪೇಟ್ರೋಲ್ ಪಂಪ್ ಬಳಿ ಬಂದಿದ್ದ ಜಿಂಕೆಯನ್ನು ಕಂಡು ಬೀದಿ ನಾಯಿಗಳು ಜಿಂಕೆಯನ್ನು ಬೇನ್ನಟ್ಟಿವೆ. ಈ ವೇಳೆ ಜಿಂಕೆಯೂ ಪ್ರಾಣ ಭಯದಿಂದ ಓಡಾಡುತ್ತಿರುವುದನ್ನು ಕಂಡು ಸ್ಥಳಿಯರು ನಾಯಿಯಿಂದ ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾರಾಯಣ ಓಣಿಕೇರಿ, ಯಲ್ಲಪ್ಪ ಬಳ್ಳಾರಿ ಹಾಗೂ ಸ್ಥಳಿಯರು ಸೇರಿ ಜಿಂಕೆಗೆ ಚಿಕಿತ್ಸೆ ಕೊಡಿಸಿ ನಂತರ ಕಾಡಿಗೆ ಬಿಟ್ಟರು.