ಸಮುದ್ರ ಸ್ನಾನಕ್ಕೆ ತೆರಳಿದ ಯುವಕ ನಾಪತ್ತೆ.!

ಕುಮಟಾ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ ನಾಪತ್ತೆಯಾದ ಘಟನೆ ತಾಲೂಕಿನ ಗೋಕರ್ಣದ ಮೇನ್ ಬೀಚ್‌ನಲ್ಲಿ ನಡೆದಿದೆ. ಶಿವಕುಮಾರ ಹುಚ್ಚಣ್ಣ (23) ನಾಪತ್ತೆಯಾದ ಯುವಕ.

ಗುಲ್ಬರ್ಗದಿಂದ ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ 9 ಜನ ಯುವಕರು ಬಂದಿದ್ದರು. ಬೆಳಗ್ಗೆ ಸಮುದ್ರ ಸ್ನಾನ ಮಾಡಿ ದೇವರ ದರ್ಶನ ಪಡೆಯಲು ಮುಂದಾದಾಗ ನಡೆದ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕರಾವಳಿ ಕಾವಲು ಪಡೆ, ಪೊಲೀಸರ ಬೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.