ಸಿದ್ದಾಪುರ: ಶಿಯೋಮಿ ಕಂಪನಿಯ ವಸ್ತುಗಳನ್ನು ಕಳೆದ ಐದು ವರ್ಷಗಳಿಂದ ಸಂಗ್ರಹಿಸಿ ಯಥಾ ಸ್ಥಿತಿಯಲ್ಲಿ ಇಟ್ಟ ಬಾಲಕನೋರ್ವ ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿ ಸ್ಥಾನ ಪಡೆದಿದ್ದಾನೆ.
ತಾಲೂಕಿನ ಸರಕುಳಿಯ ಜಗದಂಬಾ ಪೌಢಶಾಲೆಯ ಹತ್ತನೇ ತರಗತಿಯ ಅಭಿರಾಮ ಮಹಾಬಲೇಶ್ವರ ನಾಯ್ಕ ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿ ಸ್ಥಾನ ಪಡೆದ ವಿದ್ಯಾರ್ಥಿ. ಈತ ಕಳೆದ ಐದು ವರ್ಷಗಳಿಂದ ಶಿಯೋಮಿ ಕಂಪನಿಯ ವಸ್ತು ಹಾಗೂ ರ್ಯಾಪರ್ ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಟ್ಟ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದೆ.
ಸರಕುಳಿಯ ಜಗದಂಬಾ ಪ್ರೌಡಶಾಲೆಯ ದೈಹಿಕ ಶಿಕ್ಷಕ ಮಹಾಬಲೇಶ್ವರ ನಾಯ್ಕ ಹಾಗೂ ವಿಮಲಾ ನಾಯ್ಕರ ಸುಪುತ್ರನಾಗಿದ್ದು ಮೂಲತಃ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದ ಕಾನಳ್ಳಿಯವರಾಗಿದ್ದಾರೆ.