ತಮ್ಮ ಉಳಿತಾಯದ 2.25 ಲಕ್ಷವನ್ನು ಪಿಎಂ ಕೇರ್ಸ್ ಫಂಡ್ ಗೆ ದಾನ ಮಾಡಿದ ಪ್ರಧಾನಿ ಮೋದಿ.!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಉಳಿತಾಯದ 2.25 ಲಕ್ಷ ರೂ ಹಣವನ್ನು ಪಿಎಂ ಕೇರ್ಸ್ ಫಂಡ್ ಗೆ ದಾನ ಮಾಡಿದ್ದು, ಇಲ್ಲಿಯವರೆಗೆ 103 ಕೋಟಿ ರೂ ಹಣವನ್ನು ದಾನ ಮಾಡಿದ್ದಾರೆ. ತನಗಾಗಿಯೋ, ತನ್ನ ಕುಟುಂಬದವರಿಗಾಗಿಯೋ ಒಂದು ರೂಪಾಯಿ ಆಸ್ತಿಯನ್ನೂ ಮಾಡದೇ ಎಲ್ಲವನ್ನು ಬಡವರಿಗೆ, ಮಕ್ಕಳಿಗೆ, ತಾವು ತರುವ ಹೊಸ ಹೊಸ ಯೋಜನೆಗಳಿಗೆ ದಾನ ಮಾಡುತ್ತಾ ಬಂದಿದ್ದಾರೆ.

2014 ರಲ್ಲಿ ಗುಜರಾತ್ ನಿಂದ ದೆಹಲಿಗೆ ಪ್ರಧಾನಿಯಾಗಿ ಬರುವಾಗ ತಮಗೆ 15 ವರ್ಷದಲ್ಲಿ ಬಂದಿದ್ದ ಎಲ್ಲಾ ಉಡುಗೊರೆಗಳನ್ನು ಹರಾಜು ಮಾಡಿ, ಅದರಿಂದ ಬಂದ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೀಡಿದ್ದರು. ಪ್ರಧಾನಿಯಾದ ನಂತರ ಮೋದಿಜಿ ಪ್ರತಿ ವರ್ಷವೂ ತಮಗೆ ಬಂದಿದ್ದ ಎಲ್ಲಾ ಉಡುಗೊರೆಗಳನ್ನು ಹರಾಜು ಹಾಕಿ ಅದರ ಹಣವನ್ನು ದಾನ ಮಾಡುತ್ತಿದ್ದಾರೆ.

ಕಳೆದ ವರ್ಷ ವಿಶ್ವದ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಜೊತೆಗೆ ಬಂದಿದ್ದ 1.40 ಕೋಟಿ ರೂಪಾಯಿ ಹಣವನ್ನು ನಮಾಮಿ ಗಂಗೆ ಯೋಜನೆಗೆ ದಾನ ಮಾಡಿದ್ದರು. ಕೆಲ ತಿಂಗಳ ಹಿಂದೆ ತಮ್ಮ ಉಳಿತಾಯ ಖಾತೆಯಲ್ಲಿದ್ದ 21 ಲಕ್ಷ ಹಣವನ್ನೂ ಪೌರ ಕಾರ್ಮಿಕರ ನಿಧಿಗೆ ನೀಡಿದ್ದರು.

ಇನ್ನು ಹಿಂದೊಮ್ಮೆ ಒಬಾಮರನ್ನ ಭೇಟಿಯಾಗುವಾಗ ಧರಿಸಿದ್ದ ಸೂಟ್ ಕುರಿತು ವಿರೋಧ‌ ಪಕ್ಷಗಳು ವ್ಯಾಪಕ ಅಪ ಪ್ರಚಾರ ಮಾಡಿದಾಗ, ಆ‌ ಸೂಟ್ ಅನ್ನೇ‌ ಹರಾಜು ಹಾಕಿ ಅದರಿಂದ ಬಂದ 4.31 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ದಾನ ಮಾಡಿದ್ದರು.

ಒಟ್ಟಾರೆ ಇದುವರೆಗೆ ಮೋದಿಜಿ ಎಲ್ಲಾ ‌ಮೂಲಗಳಿಂದ ಸಂಗ್ರಹವಾದ 103 ಕೋಟಿ ರೂಪಾಯಿ‌ ದಾನ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಹಣಕ್ಕಾಗಿ ಲೂಟಿ ಹೊಡೆಯುತ್ತಿರುವ ರಾಜಕಾರಣಿಗಳ ನಡುವೆ ಮೋದಿಯೆಂಬ ಮಾಣಿಕ್ಯ ಭಿನ್ನವಾಗಿ ನಿಂತಿದ್ದಾರೆ. ಹಾಗಾಗಿಯೇ ವಿಶ್ವದಾದ್ಯಂತ ಮೊದಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.